2030ಕ್ಕೆ ನಟನೆಯಿಂದ ರಣ್‌ಬೀರ್ ನಿವೃತ್ತಿ

ಬಾಲಿವುಡ್‌  ನಟ ರಣ್‌ಬೀರ್ ಕಪೂರ್ ನಟನಾಗಿ ಇದು ತಮ್ಮ ಕೊನೆಯ ದಶಕ ಎಂದು ಹೇಳಿದ್ದಾರೆ.

ಬಿಬಿಸಿ ಏಷ್ಯನ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಣ್‌ಬೀರ್ ಕಪೂರ್  ಮುಂದಿನ ದಿನಗಳಲ್ಲಿ ನಿರ್ದೇಶನದತ್ತ ಮುಖಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ.  ಈ ಹೇಳಿಕೆ  ಅವರ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಇತ್ತೀಚೆಗೆ ಚಿತ್ರಕಥೆ ಬರೆಯಲು ಆರಂಭಿಸಿರುವುದಾಗಿ ರಣ್‌ಬೀರ್ ತಿಳಿಸಿದ್ದಾರೆ. ಆದರೆ ಕಥೆ ಸೃಷ್ಟಿಸುವುದು ತಾವು ಅಂದುಕೊಂಡಷ್ಟು ಸುಲಭವಲ್ಲ ಎಂಬ ಅನುಭವವಾಗಿದೆ. ಬರಹಗಾರರು ಮತ್ತು ಸೃಜನಶೀಲ ವ್ಯಕ್ತಿಗಳ ಕೆಲಸದ ಬಗ್ಗೆ ಈಗ ಮತ್ತಷ್ಟು ಗೌರವ ಹೆಚ್ಚಾಗಿದೆ. ಒಂದು ಕಥೆಯನ್ನು ರೂಪಿಸಿ, ಅದನ್ನು ಸಿನಿಮಾ ಮಾಡುವ ಹಂತಕ್ಕೆ ಕೊಂಡೊಯ್ಯುವುದು ರೋಮಾಂಚನಕಾರಿ ಅನುಭವ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಣ್‌ಬೀರ್ ಕಪೂರ್  ಸಿನಿಮಾ ಯಶಸ್ವಿಯಾಗಲಿ ಅಥವಾ ನಿರೀಕ್ಷೆಯಂತೆ ಮೂಡಿಬರದಿರಲಿ, ಕಥೆಯನ್ನು ತೆರೆಯ ಮೇಲೆ ಕಟ್ಟಿಕೊಡುವ ಪ್ರಕ್ರಿಯೆಯೇ ನಿರ್ದೇಶಕನಿಗೆ ವಿಭಿನ್ನ ಅನುಭವ ನೀಡುತ್ತದೆ. ಪ್ರೇಕ್ಷಕರಿಗೆ ಹಿತವಾದ ಅನುಭವ ನೀಡುವ ಕೌಟುಂಬಿಕ ಕಥಾಹಂದರದ ಸಿನಿಮಾ ನಿರ್ದೇಶಿಸುವ ಆಸೆ ವ್ಯಕ್ತಪಡಿಸಿದ್ದಾರೆ.

ಸದ್ಯ ಕೈಯಲ್ಲಿರುವ ಸಿನಿಮಾಗಳನ್ನು ಪೂರ್ಣಗೊಳಿಸಿದ ಬಳಿಕ ರಣ್‌ಬೀರ್ ನಿರ್ದೇಶನ ಕೈಗೆತ್ತಿಕೊಳ್ಳುವ ಯೋಜನೆ ಹೊಂದಿದ್ದಾರೆ.  ತಮ್ಮ ಮೊದಲ ಸಿನಿಮಾದಲ್ಲಿ ತಾವೇ ನಾಯಕನಾಗಿ ನಟಿಸುವ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!