‘ಧರ್ಮನ್’ ಚಿತ್ರತಂಡ ಸೇರಿದ ಶ್ರೀಲೀಲಾ

ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ ಬಹುನಿರೀಕ್ಷಿತ ಸಿನಿಮಾ ‘ಧರ್ಮನ್’ ಚಿತ್ರತಂಡವನ್ನು ಶ್ರೀಲೀಲಾ  ಸೇರಿಕೊಂಡಿದ್ದಾರೆ.

ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಶ್ರೀಲೀಲಾ ಅವರ ಸೇರ್ಪಡೆಯನ್ನು ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಿದೆ. ಈಗಾಗಲೇ ನಯನತಾರಾ ಚಿತ್ರತಂಡ ಸೇರಿಕೊಂಡಿದ್ದಾರೆ. ರಜನಿಕಾಂತ್, ನಯನತಾರಾ ಮತ್ತು ಶ್ರೀಲೀಲಾ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿರುವುದು ಕುತೂಹಲವನ್ನು ಹೆಚ್ಚಿಸಿದೆ.

ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ‘ಪರಾಶಕ್ತಿ’ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದ್ದ ಶ್ರೀಲೀಲಾ, ಶಿವಕಾರ್ತಿಕೇಯನ್, ರವಿ ಮೋಹನ್ ಮತ್ತು ಅಥರ್ವ ಜೊತೆ ತೆರೆ ಹಂಚಿಕೊಂಡಿದ್ದರು. ಇದೀಗ ರಜನಿಕಾಂತ್ ನಟನೆಯ ‘ಧರ್ಮನ್’ ಮೂಲಕ ಮತ್ತೊಂದು ದೊಡ್ಡ ಅವಕಾಶ ಪಡೆದುಕೊಂಡಿದ್ದಾರೆ.

ಈ ಸಿನಿಮಾವನ್ನು  ಕಮಲ್ ಹಾಸನ್ ಮತ್ತು ಆರ್. ಮಹೇಂದ್ರನ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ‘ರಾಜ್‌ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್’ ಹಾಗೂ ‘ಟರ್ಮರಿಕ್ ಮೀಡಿಯಾ’ ಸಂಸ್ಥೆಗಳ ಮೂಲಕ ಬಿಗ್ ಬಜೆಟ್‌ನಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. ‘ಓ ಮೈ ಕಡವುಳೆ’ ಖ್ಯಾತಿಯ ಅಶ್ವತ್ಥ್ ಮಾರಿಮುತ್ತು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.

ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸುತ್ತಿದ್ದಾರೆ. ಜನಪ್ರಿಯ ಸಾಹಸ ನಿರ್ದೇಶಕರಾದ ಅನ್ಬರಿವ್ ಅದ್ದೂರಿ ಸಾಹಸ ದೃಶ್ಯಗಳಿಗಾಗಿ  ಕೆಲಸ ಮಾಡುತ್ತಿದ್ದಾರೆ.

—-

 

 

Be the first to comment

Leave a Reply

Your email address will not be published. Required fields are marked *

Translate »
error: Content is protected !!