ಕನ್ನಡ ರಾಜ್ಯೋತ್ಸವದಂದು ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಆಡಿಯೋ ಸಂಸ್ಥೆ ಲೋಕಾರ್ಪಣೆಗೊಂಡಿದೆ. ಸಿನಿಮಾ ಪತ್ರಕರ್ತ ಮತ್ತು ಪ್ರಚಾರಕರ್ತ ಪ್ರವೀಣ್ ಏಕಾಂತರ ಸಾರಥ್ಯದ ಕ ಪಿಚ್ಚರ್ ( ಕನ್ನಡ ಪಿಚ್ಚರ್) ಸಂಸ್ಥೆಯ ಮತ್ತೊಂದು ವಿಭಾಗ ಕ ಮ್ಯೂಸಿಕ್. ಹೊಸ ಬಗೆಯ ಹೊಸ ತಂಡಗಳ ಸಿನಿಮಾಗಳ ಜತೆ ನಿಲ್ಲೋ ಧ್ಯೇಯ ಈ ಸಂಸ್ಥೆ ಹೊಂದಿದ್ದು, ಚೊಚ್ಚಲ ಸಿನಿಮಾವನ್ನಾಗಿ 1st ಲವ್ ಗುರು ಆಡಿಯೋ ಹಕ್ಕುಗಳನ್ನ ಪಡೆದಿದೆ. ಅಂದ್ರಂತೆ ನಾದಬ್ರಹ್ಮ ಹಂಸಲೇಖರ ಅಮೃತವಾಣಿಯೊಂದಿಗೆ ಚಿತ್ರಸಾಹಿತಿ ಕವಿರಾಜ್ ಕಮ್ಯೂಸಿಕ್ ಆಡಿಯೋ ಲೇಬಲ್ನ ಲೋಕಾರ್ಪಣೆ ಮಾಡಿದ್ರು. ಇವರಿಗೆ ನಿರ್ದೇಶಕ ಹಾಗೂ ಚಿತ್ರಸಾಹಿತಿ ಚೇತನ್ ಕುಮಾರ್ ಹಾಗೂ ಚಿತ್ರಸಾಹಿತಿ ನಾಗಾರ್ಜುನ್ ಶರ್ಮಾ ಜೊತೆಯಾಗಿದ್ರು..
1st ಲವ್ ಗುರು ನಿರ್ದೇಶಕ ಗುರುಪ್ರಸಾದ್ ಗುರುಗಳಾದ ಜಾದುಗಾರ ರಮೇಶ್ ರವರ ಮ್ಯಾಜಿಕ್ ನೊಂದಿಗೆ ಕ ಮ್ಯೂಸಿಕ್ ಲೋಗೋ ಹಾಗೂ 1st ಲವ್ ಗುರು ಚಿತ್ರದ ನಾಯಕ ನಾಯಕಿ ವೇದಿಕೆ ಮೇಲೆ ಪರಿಚಯವಾಗಿದ್ದು ವಿಶೇಷವಾಗಿತ್ತು.

1st ಲವ್ ಗುರು ಚಿತ್ರದ ಟೈಟಲ್ ಹಾಡು, ಶುರು 1st ಲವ್ ಗುರು ಕ ಮ್ಯೂಸಿಕ್ ನ ಮೊದಲ ಹಾಡಾಗಿ ಬಿಡುಗಡೆಯಾಗಿದೆ.
ಮನೋಜವಂ ಆತ್ರೇಯ ಚೊಚ್ಚ ಸಂಗೀತ ಸಂಯೋಜನೆ 1st ಲವ್ ಗುರು ಚಿತ್ರದ ಈ ಹಾಎಇಗೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದು,ವರುಣ್ ರಾಮಚಂದ್ರ ಮತ್ತು ಸುರಭಿ ಹಾಡಿದ್ದಾರೆ.
ಮಾಧುರ್ಯಭರಿತ ಈ ಪ್ರೇಮ ಗೀತೆಯಲ್ಲಿ ಚಿತ್ರದ ನಾಯಕ ಯುದೀತ್ ಶೆಟ್ಟಿ, ನಾಯಕಿ ರಾಧ್ಯಾರಾಜ್ ಹದಿಹರೆಯದ ಪ್ರೇಮಿಗಳಾಗಿ ಕಾಣಿಸಿಕೊಂಡಿದ್ದು, ಹಾಡು ಯುವ ಮನಸುಗಳನ್ನ ಸೆಳೆಯುವಂತಿದೆ.
1st ಲವ್ ಗುರು ಚಿತ್ರದ ಮೂಲಕ ನಿರ್ದೇಶಕ ಗುರುಪ್ರಸಾದ್ ಉದ್ಯಮಕ್ಕೆ ಕಾಲಿಡ್ತಿದ್ದಾರೆ. ರಂಗಭೂಮಿ ಹಿನ್ನೆಲೆಯ ಗುರು ಚೊಚ್ಚಲ ಚಿತ್ರದಲ್ಲಿ ಭರವಸೆ ಹುಟ್ಟಿಸ್ತಿದ್ದಾರೆ. ಅದಕ್ಕೆ ಸಾಕ್ಷಿಯೇ ಚಿತ್ರದ ಪೋಸ್ಟರ್ ಮತ್ತು ಹಾಡು.

1st ಲವ್ ಗುರು ಚಿತ್ರದಲ್ಲಿ ಪ್ರತಿಭಾನ್ವಿತ ಹಿರಿಯ ಕಿರಿಯ ತಾರಬಳಗವೇ ಇದೆ. ಹಿರಿಯ ನಟ ಶೋಭರಾಜ್, ಚಂದ್ರಕಲಾ ಮೋಹನ್, ಭಾಗ್ಯಶ್ರೀ, ಮ್ಯಾಜಿಕ್ ರಮೇಶ್, ಶ್ರೀಧರ್, ಡ್ರಾಮಾ ಜೂ. ಮಹೇಂದ್ರ, ಪ್ರವೀಣ್ ಜೈನ್, ಗಜೇಂದ್ರ, ಯುವ ಶೆಟ್ಟಿ ಪ್ರಮುಖರಾಗಿ ಅಭಿನಯಿಸಿದ್ದಾರೆ.
1st ಲವ್ ಗುರು ಚಿತ್ರಕ್ಕೆ ಛಾಯಾಗ್ರಹಣ ಸತೀಶ್ ಜಿ , ಹಿರಿಯ ಸಂಕಲನಕಾರ ಸುರೇಶ್ ಅರಸ್ ಕೈಚಳಕವಿದೆ. 1st ಲವ್ ಗುರು ಚಿತ್ರವನ್ನ ಕೆ.ಎಂ.ಜಿ ಪ್ರೊಡಕ್ಷನ್ಸ್ ನಿರ್ಮಿಸಿದ್ದು, ನವೆಂಬರ್ 27ಕ್ಕೆ ರಾಜ್ಯದಾದ್ಯಂತ ಬಿಡುಗಡೆಯಾಗ್ತಿದೆ.





Be the first to comment