ಸ್ಪರ್ಧಿಗಳಿಗೆ ಸುದೀಪ್ ವಾರ್ನಿಂಗ್

ಬಿಗ್‌ಬಾಸ್ ಕನ್ನಡ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಅವರು ಹಲವು ಬಾರಿ ಸ್ಪರ್ಧಿಗಳ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿ ‘ನಮ್ಮಪ್ಪನಾಣೆ ಪಾಠ ಕಲಿಸೋದು ಗೊತ್ತಿದೆ’  ಎಂದು ಸ್ಪರ್ಧಿಗಳಿಗೆ  ವಾರ್ನಿಂಗ್ ನೀಡಿದ್ದಾರೆ.

ಶನಿವಾರದ ಸಂಚಿಕೆಯ ಪ್ರೋಮೊ ಬಿಡುಗಡೆಯಾಗಿದ್ದು, “ನಿಮಗೆ ಹೇಗೆ ಪಾಠ ಕಲಿಸಬೇಕು ಅಂತ ನಮ್ಮಪ್ಪನಾಣೆ ನನಗೆ ಗೊತ್ತಿದೆ” ಎಂದು ಸುದೀಪ್ ಖಡಕ್ ಆಗಿ ಹೇಳಿರುವುದು ಪ್ರೋಮೊದ ಪ್ರಮುಖ ಆಕರ್ಷಣೆಯಾಗಿದೆ.

ಸುದೀಪ್ ಅವರು ದಾಖಲೆಗಳೊಂದಿಗೆ ವೇದಿಕೆಗೆ ಆಗಮಿಸಿದ್ದಾರೆ. ಸ್ಪರ್ಧಿಗಳ ನಡೆಯನ್ನು ಗಂಭೀರವಾಗಿ ಪರಿಗಣಿಸಿರುವಂತೆ ಕಾಣುವ ಅವರು ತಮ್ಮ ಮಾತುಗಳಿಂದ ಸ್ಪರ್ಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಸುದೀಪ್ ಅವರ  ಹೇಳಿಕೆ ಸ್ಪರ್ಧಿಗಳಿಗೆ ಯಾವ ರೀತಿಯ ಸಂದೇಶ ನೀಡಲಿದೆ ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ.

ಸ್ಪರ್ಧಿಗಳ ತಪ್ಪುಗಳನ್ನು ಚರ್ಚಿಸಿ ಎಚ್ಚರಿಕೆ ನೀಡುವ ಸುದೀಪ್  ಈ ಬಾರಿ ದಾಖಲೆಗಳನ್ನು ಮುಂದಿಟ್ಟುಕೊಂಡು ಮಾತನಾಡಿರುವುದು ಸಂಚಿಕೆಯ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ. ಸ್ಪರ್ಧಿಗಳ ವರ್ತನೆಗೆ ಸಂಬಂಧಿಸಿದಂತೆ ಅವರು ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಇಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.

ಹೊಸ ಪ್ರೋಮೊ ನೋಡಿದರೆ  ಈ ವಾರದ ವೀಕೆಂಡ್ ಸಂಚಿಕೆಯಲ್ಲಿ ಸುದೀಪ್ ಅವರಿಂದ ಸ್ಪರ್ಧಿಗಳಿಗೆ ಖಡಕ್ ಕ್ಲಾಸ್ ಸಿಗುವ ಸಾಧ್ಯತೆ ಇದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!