‘ಲಾರ್ಡ್ ಗಾಗ’ ಪೋಸ್ಟರ್ ಬಿಡುಗಡೆ

ವೈ ಕೆ ನಿರ್ದೇಶನದ ‘ಲಾರ್ಡ್ ಗಾಗ’ ಚಿತ್ರದ ಪೋಸ್ಟರ್ ಬಿಡುಗಡೆ ಆಗಿದೆ.

‘ಲಾರ್ಡ್ ಗಾಗ’ ಚಿತ್ರದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರತಂಡದ ಸದಸ್ಯರು ಭಾಗವಹಿಸಿ ತಮ್ಮ ಅನುಭವಗಳನ್ನು ಹೇಳಿದರು.

ನಿರ್ದೇಶಕ ವೈಕೆ ಮಾತನಾಡಿ, ನಿರ್ಧಾರ ತೆಗೆದುಕೊಳ್ಳಲು ಎಡವಿದರೆ ಏನೆಲ್ಲಾ ಸಮಸ್ಯೆ ಎದುರಿಸುತ್ತಾನೆ ಎನ್ನುವುದನ್ನು ಚಿತ್ರದ ಮೂಲಕ ಹೇಳಲಾಗಿದೆ.  ಸಿನಿಮಾ ಹೊಸತನದಿಂದ ಕೂಡಿರಲಿದೆ. ಬಹುತೇಕ ಗೋಕರ್ಣದಲ್ಲಿ ಚಿತ್ರೀಕರಣ ಮಾಡಲಾಗಿದೆ. ಶೇ. 5 ರಷ್ಟು  ಚಿತ್ರೀಕರಣ ಹಾಸನದಲ್ಲಿ ಮಾಡಲಾಗಿದೆ ಎಂದರು.

ನಿರ್ಮಾಪಕ ಹಾಗು ನಟ ಮುಕಿ ರೆಗುನಾಥನ್ ಮಾತನಾಡಿ,  ‘ಲಾರ್ಡ್‍ಗಾಗ’ ಚಿತ್ರ ಕಳೆದ ವರ್ಷ ಮಾರ್ಚ್‍ನಲ್ಲಿ ಆರಂಭ ಮಾಡಲಾಗಿತ್ತು. ಡಿಸೆಂಬರ್ ತಿಂಗಳಲ್ಲಿ ಚಿತ್ರೀಕರಣ ಪೂರ್ಣಗೊಳಿಸಲಾಗಿದೆ. ಇಡೀ ತಂಡದ ಪರಿಶ್ರಮದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಗೋಕರ್ಣದದಲ್ಲಿ ಮಳೆಯ ನಡುವೆ ಚಿತ್ರೀಕರಣ ಮಾಡಲಾಗಿದೆ.ಸದ್ಯದಲ್ಲಿಯೇ ಚಿತ್ರ ತೆರೆಗೆ ಬರಲಿದೆ’ ಎಂದು ತಿಳಿಸಿದರು.

ನಿರ್ದೇಶಕ ವೈ ಕೆ ಚಿತ್ರದ ಕಥೆಯನ್ನು 23 ಬಾರಿ ಬರೆದಿದ್ದಾರೆ.  80 ದಿನದ ಚಿತ್ರೀಕರಣದಲ್ಲಿ 4.5 ಕೋಟಿ ಖರ್ಚಾಗಿದೆ’ ಎಂದು ಚಿತ್ರದ ಬಗ್ಗೆ ಮಾಹಿತಿ ನೀಡಿದರು.

ಶೂನ್ಯ , ದಿಶಾ,  ಸ್ವರೂಪಿಣಿ ಸೇರಿದಂತೆ ಹಲವರು ಚಿತ್ರದಲ್ಲಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!