ಟ್ರೋಲ್‌ಗಳಿಗೆ ರಶ್ಮಿಕಾ ಖಡಕ್ ಉತ್ತರ

‘ನನ್ನ ಜೊತೆ ಇರುವವರೊಂದಿಗೆ ನಗುತ್ತಾ, ಪ್ರೀತಿಯಿಂದ ಮಾತನಾಡುವುದು ನನ್ನ ಸಹಜ ಸ್ವಭಾವ. . ಕೆಲವರು ಇದನ್ನು ‘ಓವರ್ ಆಕ್ಟಿಂಗ್’ ಅಥವಾ ‘ಕ್ರಿಂಜ್’ ಎಂದು ಟೀಕಿಸಿದರೂ ಅಂತಹ ಅಭಿಪ್ರಾಯಗಳನ್ನು ತಾನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ’ ಎಂದು ರಶ್ಮಿಕಾ ಮಂದಣ್ಣ ಸ್ಪಷ್ಟಪಡಿಸಿದ್ದಾರೆ.

‘ಜಗತ್ತಿನಲ್ಲಿ ಎಲ್ಲರ ಮೆಚ್ಚುಗೆ ಪಡೆಯುವುದು ಸಾಧ್ಯವಿಲ್ಲ.  ಇತರರ ಟೀಕೆ ಅಥವಾ ಅಭಿಪ್ರಾಯಕ್ಕಾಗಿ ತನ್ನ ಮೂಲ ವ್ಯಕ್ತಿತ್ವವನ್ನು ಬದಲಿಸಿಕೊಳ್ಳುವ ಅಗತ್ಯವಿಲ್ಲ. ಕುಟುಂಬದವರು ಮತ್ತು ಆಪ್ತ ಸ್ನೇಹಿತರು ತಮ್ಮ ಧನಾತ್ಮಕ ಶಕ್ತಿ ಹಾಗೂ ಉತ್ಸಾಹವನ್ನು ಮೆಚ್ಚಿಕೊಳ್ಳುತ್ತಾರೆ. ಆದ್ದರಿಂದ ಸಾಮಾಜಿಕ ಜಾಲತಾಣದ ಟೀಕೆಗಳಿಗೆ ಹೆದರಿ ಬದಲಾಗುವುದಿಲ್ಲ ಎಂದು ರಶ್ಮಿಕಾ ಹೇಳಿದ್ದಾರೆ.

ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ನಟಿಸಿರುವ ‘ರಣಬಾಲಿ’ ಸಿನಿಮಾ ಅಕ್ಟೋಬರ್ 16ರಂದು  ಬಿಡುಗಡೆಯಾಗಲಿದೆ. ಸಿನಿಮಾ ಪ್ರಚಾರ ವೇಳೆ ವಿಜಯ್ ಮತ್ತು ರಶ್ಮಿಕಾ ನಡುವಿನ ವೈಯಕ್ತಿಕ ಒಡನಾಟದ ಜೊತೆಗೆ ರಶ್ಮಿಕಾ ಅವರ ಉತ್ಸಾಹ ಮತ್ತು ನಗು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.

ಪ್ರಚಾರ ಕಾರ್ಯಕ್ರಮಗಳಲ್ಲಿ ರಶ್ಮಿಕಾ  ನಗುತ್ತಾ, ಉತ್ಸಾಹದಿಂದ ಕಾಣಿಸಿಕೊಳ್ಳುವುದನ್ನು ಕೆಲವರು ಮೆಚ್ಚಿಕೊಂಡಿದ್ದಾರೆ. ಆದರೆ  ಕೆಲವರು ‘ಓವರ್ ಆಕ್ಟಿಂಗ್’, ‘ಕ್ರಿಂಜ್’, ‘ನಕಲಿ ನಗು’ ಎಂದು ಟೀಕಿಸಿ ಟ್ರೋಲ್ ಮಾಡಿದ್ದಾರೆ. ಈ ಬಗ್ಗೆ ಸಂದರ್ಶನದಲ್ಲಿ ರಶ್ಮಿಕಾಗೆ ನೇರವಾಗಿ ಪ್ರಶ್ನೆ ಕೇಳಲಾಗಿದ್ದು ತಮ್ಮ ವರ್ತನೆಯ ಹಿಂದಿನ ಕಾರಣವನ್ನು ವಿವರಿಸಿದ್ದಾರೆ.

ಹಲವು ಸಿನಿಮಾಗಳನ್ನು ಕೈಯಲ್ಲಿಟ್ಟುಕೊಂಡಿರುವ ರಶ್ಮಿಕಾ ತಮ್ಮ ಸಹಜ ಸ್ವಭಾವದ ವಿಚಾರದಲ್ಲಿ  ಟ್ರೋಲ್‌ಗಳಿಗೆ ಮಣಿಯುವುದಿಲ್ಲ ಎಂಬ ಸಂದೇಶ ನೀಡಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!