10 ಕೋಟಿಯತ್ತ ‘ಪ್ರೇಮದ ಊರಲಿ’ ಕಲೆಕ್ಷನ್

ಪ್ರೇಕ್ಷಕರ  ಮೌತ್ ಪಬ್ಲಿಸಿಟಿಯಿಂದ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ ‘ಪ್ರೇಮದ ಊರಲಿ’ ಸಿನಿಮಾ ಕಲೆಕ್ಷನ್ 10 ಕೋಟಿಯ  ಸಮೀಪದಲ್ಲಿದೆ.

ಸೆಪ್ಟೆಂಬರ್ 25ರಂದು ಕೇವಲ 60 ಪ್ರದರ್ಶನಗಳೊಂದಿಗೆ ಆರಂಭವಾದ ಈ ಸಿನಿಮಾ ಪ್ರೇಕ್ಷಕರ ಭಾರಿ ಬೇಡಿಕೆಯಿಂದಾಗಿ 2ನೇ ವಾರದ ವೇಳೆಗೆ ಬರೋಬ್ಬರಿ 700ಕ್ಕೂ ಅಧಿಕ ಶೋಗಳನ್ನು ಪಡೆದುಕೊಂಡಿದೆ. ಚಿತ್ರಕ್ಕೆಆರಂಭದಲ್ಲಿ ದೊಡ್ಡ ಮಟ್ಟದ ಓಪನಿಂಗ್ ಸಿಕ್ಕಿರಲಿಲ್ಲ. ಕೇವಲ 13 ಲಕ್ಷ ರೂಪಾಯಿಯೊಂದಿಗೆ ತನ್ನ ಖಾತೆ ತೆರೆದಿತ್ತು.

ಜನರಿಂದ ಜನರಿಗೆ ಹರಡಿದ ಸಕಾರಾತ್ಮಕ ವಿಮರ್ಶೆಗಳಿಂದಾಗಿ  ಚಿತ್ರದ ಗಳಿಕೆ ನಿರಂತರವಾಗಿ ಏರಿಕೆಯಾಗುತ್ತಾ ಹೋಯಿತು. ಅಕ್ಟೋಬರ್ 2ರ ಗಾಂಧಿ ಜಯಂತಿ ರಜಾದಿನದಂದು ಸಿನಿಮಾ  3.16 ಕೋಟಿಗಿಂತಲೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದೆ. ಒಟ್ಟು 8 ದಿನಗಳ ಥಿಯೇಟರ್ ರನ್ ಮುಕ್ತಾಯದ ವೇಳೆಗೆ ಈ ಸಿನಿಮಾ ವಿಶ್ವಾದ್ಯಂತ ಒಟ್ಟು ₹9.82 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ.

ಗಾಂಧಿ ಜಯಂತಿಯ ರಜೆ ಹಾಗೂ  ಶನಿವಾರ, ಭಾನುವಾರ ಒಟ್ಟಿಗೆ ಬಂದಿರುವುದು ಚಿತ್ರದ ಕಲೆಕ್ಷನ್ ಗತಿಯನ್ನು ಮತ್ತಷ್ಟು ಹೆಚ್ಚಿಸಿದೆ.  ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರುತ್ತಿಲ್ಲ ಎಂಬ ಕೊರಗಿನ ನಡುವೆ ಶ್ರೀರಾಮ್ ಹಾಗೂ ತಪಸ್ವಿನಿ ಪೂಣಚ್ಚ ನಟನೆಯ ‘ಪ್ರೇಮದ ಊರಲಿ’ಚಿತ್ರ  ಸಣ್ಣ ಬಜೆಟ್ ಸಿನಿಮಾಗಳ ಪವರ್ ನ್ನು ಬಾಕ್ಸ್ ಆಫೀಸ್‌ನಲ್ಲಿ ಸಾಬೀತುಪಡಿಸುತ್ತಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!