ಯುವ ಪ್ರತಿಭೆ ಶ್ರೀರಾಮ್ ಗಂಧರ್ವ ಸಾರಥ್ಯದಲ್ಲಿ ನವಿರಾದ ಪ್ರೇಮವನ್ನು ಸಾರುವ ಆಲ್ಬಮ್ ಗೀತೆ ‘ಕನಸಲು..’ ಬಿಡುಗಡೆಯಾಗಿದೆ.
‘ಕನಸಲು.. ಹಾಡನ್ನು ವೇದಿಕೆ ಮೇಲೆ ಸಾಂಕೇತಿಕವಾಗಿ ಬಿಡುಗಡೆಗೊಳಿಸಿ ಪರದೆಯ ಮೇಲೆ ಪ್ರದರ್ಶಿಸಲಾಯಿತು. ‘ಕಂಗ್ರಾಜುಲೇಶನ್ಸ್ ಬ್ರದರ್ಸ್’ ಚಿತ್ರದ ನಾಯಕ ರಕ್ಷಿತ್ ನಾಗ್ ಅತಿಥಿಯಾಗಿ ಆಗಮಿಸಿ ಶುಭಕೋರಿದರು.
ಖ್ಯಾತ ಜಾನಪದ ಗಾಯಕ ಜೋಗಿಲಾ ಸಿದ್ಧರಾಜು ಮಾತನಾಡಿ, ‘ 35 ವರ್ಷಗಳಿಂದ ಜನಪದ ಗಾಯಕನಾಗಿರುವ ನಾನು ಕಳೆದ ಒಂದು ದಶಕದಿಂದ ಸುಮಾರು 12ರಷ್ಟು ಸಿನಿಮಾ ಗೀತೆಗಳನ್ನು ಹಾಡಿದ್ದೇನೆ. ರಾಗ ಸಂಯೋಜಿಸಿ ಹಾಡಿರುವ ಶ್ರೀರಾಮ್ ಬಹುಮುಖ ಪ್ರತಿಭೆಗೆ ಅಭಿನಂದನೆಗಳು. ಕನ್ನಡದಲ್ಲಿ ಆಮದು ಗಾಯಕ ಗಾಯಕಿಯರನ್ನೇ ಬಳಸುತ್ತಿರುತ್ತಾರೆ. ಅವರ ಮಧ್ಯೆ ಶ್ರೀರಾಮ್ ನಂಥವರ ಪ್ರತಿಭೆ ಅನಾವರಣವಾಗಲು ಇಂಥ ಆಲ್ಬಮ್ ಬೇಕಾಗುತ್ತದೆ ಎಂದರು.
‘ಕನಸಲು’ ಆಲ್ಬಮ್ ಹಾಡಿನಲ್ಲಿ ಟೈಲರಿಂಗ್ ಶಾಪ್ ಹುಡುಗನ ಪ್ರೇಮವನ್ನು ತೋರಿಸಲಾಗಿದೆ. ಅಲ್ಲಿಗೆ ಬರುವ ಮೀರಾ ಎನ್ನುವ ಯುವತಿಯಲ್ಲಿ ದರ್ಜಿಯ ಸಹಾಯಕ ಪ್ರೀತಿಯಲ್ಲಿ ಬೀಳುತ್ತಾನೆ. ಅದಕ್ಕೆ ಅವಳ ಪ್ರತಿಕ್ರಿಯೆ ಏನಿರುತ್ತದೆ ಎನ್ನುವುದನ್ನು ಹಾಡಿನ ಕೊನೆಯಲ್ಲಿ ತೋರಿಸಲಾಗಿದೆ.
ಗೀತೆಯನ್ನು ಬರೆದು, ಸಂಗೀತ ಸಂಯೋಜಿಸಿ, ಹಾಡಿ ನಿರ್ದೇಶಿಸಿದ ಶ್ರೀರಾಮ್ ಗಂಧರ್ವ , ‘ಲವ್ ಸ್ಟೋರೀ ಮಾಡಬೇಕು ಎನ್ನುವುದು ಮೊದಲೇ ನಿರ್ಧಾರವಾಗಿತ್ತು. ಸಂಗೀತ ನಿರ್ದೇಶಕನಾಗಿ ಸಂಗೀತಕ್ಕೆ ಭಾಷೆಯ ಗಡಿಗಳಿಲ್ಲ. ತಂದೆ ನಿರ್ದೇಶಕರಾದರೂ ಅವರನ್ನು ಈ ಪ್ರಾಜೆಕ್ಟ್ ನಲ್ಲಿ ಬಳಸಿಕೊಂಡಿಲ್ಲ’ ಎಂದರು.
ಇದೇ ಸಂದರ್ಭದಲ್ಲಿ ಹಿಂದಿ ಹಾಡನ್ನು ಕೂಡ ಪ್ರದರ್ಶಿಸಲಾಯಿತು. ಹಿಂದಿ ಸಾಹಿತ್ಯವನ್ನು ಜುನೈದ್ ಅಹಮದ್ ಕಬೀರ್ ರಚಿಸಿದ್ದಾರೆ.
ಡಾಲಿ ಪಿಕ್ಚರ್ಸ್ ಬ್ಯಾನರ್ ನಲ್ಲಿ ರಿಚರ್ಡ್ ಈ ಆಲ್ಬಮ್ ನಿರ್ಮಿಸಿದ್ದಾರೆ. ರವಿಕುಮಾರ್ ಬಿ.ಎಮ್ ಅವರು ಹಾಡಿನ ಛಾಯಾಗ್ರಹಣ ಮತ್ತು ಸಂಕಲನದ ಜವಾಬ್ದಾರಿ ನಿರ್ವಹಿಸಿದ್ದಾರೆ.
—–





Be the first to comment