‘ರಾಕಾ’ ಚಿತ್ರ ಗಿನ್ನೆಸ್ ದಾಖಲೆ

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಾಯಕರಾಗಿ ನಟಿಸುತ್ತಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ  ಚಿತ್ರ ‘ರಾಕಾ’ ಸಿನಿ ತಂತ್ರಜ್ಞಾನದಲ್ಲಿ  ಗಿನ್ನೆಸ್ ವಿಶ್ವ ದಾಖಲೆಗೆ ಭಾಜನವಾಗಿದೆ.

ಖ್ಯಾತ ನಿರ್ದೇಶಕ ಅಟ್ಲಿ ಸಾರಥ್ಯ  ಹಾಗೂ ಸನ್ ಪಿಕ್ಚರ್ಸ್ ಸಂಸ್ಥೆಯ ಕಲಾನಿಧಿ ಮಾರನ್ ನಿರ್ಮಾಣದ ‘ರಾಕಾ’ ಚಿತ್ರ ‘ನೈಜ ಸಮಯದಲ್ಲಿ ಏಕಕಾಲಕ್ಕೆ ಗರಿಷ್ಠ ಸಂಖ್ಯೆಯ ಕಲಾವಿದರ ಮೋಷನ್-ಕ್ಯಾಪ್ಚರ್’  ವಿಭಾಗದಲ್ಲಿ ಗಿನ್ನೆಸ್ ವಿಶ್ವ ದಾಖಲೆಗೆ ಭಾಜನವಾಗಿದೆ.  2026ರ ಫೆಬ್ರವರಿಯಲ್ಲಿ ನಡೆದ   ತಾಂತ್ರಿಕ ಪ್ರಯತ್ನದಲ್ಲಿ ಒಂದೇ ಸೆಷನ್‌ನಲ್ಲಿ ಒಟ್ಟು 37 ಕಲಾವಿದರನ್ನು ರಿಯಲ್-ಟೈಮ್‌ನಲ್ಲಿ ಸೆರೆಹಿಡಿದು ಸಾಧನೆ ಮಾಡಲಾಗಿತ್ತು.  2026ರ ಸೆಪ್ಟೆಂಬರ್ 15ರಂದು ಈ ದಾಖಲೆಯನ್ನು ಗಿನ್ನೆಸ್ ಸಂಸ್ಥೆ ಅಧಿಕೃತವಾಗಿ ದೃಢೀಕರಿಸಿದೆ.

ಚಿತ್ರತಂಡದ ಪ್ರಮುಖ ಕಲಾವಿದರು ಮತ್ತು ತಾಂತ್ರಿಕ ವರ್ಗದ ಉಪಸ್ಥಿತಿಯಲ್ಲಿ ನಡೆದ ಸಮಾರಂಭದಲ್ಲಿ ಗಿನ್ನೆಸ್ ವಿಶ್ವ ದಾಖಲೆಯ ಹಿರಿಯ ತೀರ್ಪುಗಾರರಾದ ಸ್ವಪ್ನಿಲ್ ದಂಗ್ರಿಕರ್ ಅವರು  ಅಲ್ಲು ಅರ್ಜುನ್ ಹಾಗೂ  ಅಟ್ಲಿ ಅವರಿಗೆ  ಪ್ರಮಾಣಪತ್ರವನ್ನು ಹಸ್ತಾಂತರಿಸಿದರು.

ಈ ಅಪರೂಪದ ಮೋಷನ್-ಕ್ಯಾಪ್ಚರ್ ಪ್ರಕ್ರಿಯೆ ಭಾರತೀಯ ಚಿತ್ರರಂಗದ ಮಟ್ಟಿಗೆ ಅತ್ಯಂತ ಸವಾಲಿನದ್ದಾಗಿತ್ತು. ಇದರಲ್ಲಿ 4 ವರ್ಷದ ಪುಟ್ಟ ಮಗುವಿನಿಂದ ಹಿಡಿದು 70 ವರ್ಷದ ಹಿರಿಯ ವೃದ್ಧರವರೆಗೆ ಒಟ್ಟು 37 ಜನ ಕಲಾವಿದರು ಭಾಗವಹಿಸಿದ್ದರು. ಒಂದೇ ಕ್ಯಾಪ್ಚರ್ ವ್ಯಾಪ್ತಿಯಲ್ಲಿ ಪ್ರತಿಯೊಬ್ಬ ಕಲಾವಿದರ ಮುಖಭಾವ, ದೈಹಿಕ ಭಾಷೆ ಹಾಗೂ ಅಭಿನಯದ ಸೂಕ್ಷ್ಮಾತಿಸೂಕ್ಷ್ಮ ವಿವರಗಳು ತಪ್ಪಿಹೋಗದಂತೆ ನೈಜವಾಗಿ ಸೆರೆ ಹಿಡಿಯುವುದು ದೊಡ್ಡ ಸವಾಲಾಗಿತ್ತು.

ಈ  ಸಾಹಸವನ್ನು ಸಾಕಾರಗೊಳಿಸಲು ಚಿತ್ರದ ವಿಎಫ್‌ಎಕ್ಸ್ ಪ್ರೊಡ್ಯೂಸರ್ ನೇತೃತ್ವದಲ್ಲಿ ಹೊಚ್ಚಹೊಸ ಮೋಷನ್-ಕ್ಯಾಪ್ಚರ್ ಪೈಪ್‌ಲೈನ್ ಹಾಗೂ ವರ್ಕ್‌ಫ್ಲೋ ಸಿದ್ಧಪಡಿಸಲಾಗಿತ್ತು.  92 ಅತ್ಯಾಧುನಿಕ ಆಪ್ಟಿಕಲ್ ಮೋಷನ್-ಕ್ಯಾಪ್ಚರ್ ಕ್ಯಾಮೆರಾಗಳು, ನಿಖರ ಕ್ಯಾಲಿಬ್ರೇಷನ್, ನೆಟ್‌ವರ್ಕಿಂಗ್, ಸಿಂಕ್ರೊನೈಸೇಶನ್, ಅನ್‌ರಿಯಲ್ ಎಂಜಿನ್‌ನ ರಿಯಲ್-ಟೈಮ್ ದೃಶ್ಯೀಕರಣ, ವಿಟ್‌ನೆಸ್ ಕ್ಯಾಮೆರಾಗಳು ಹಾಗೂ ಫೇಶಿಯಲ್ ಕ್ಯಾಪ್ಚರ್ ಸೇರಿದಂತೆ ವಿಶ್ವ ಮಟ್ಟದ ತಾಂತ್ರಿಕ ಪರಿಸರವನ್ನು ಇದಕ್ಕಾಗಿ ನಿರ್ಮಿಸಲಾಗಿತ್ತು.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!