‘ಲಂಬೋದರ 2.0’ ಚಿತ್ರದಲ್ಲಿ ಮೇಘನಾ ‘ಸಾಧ್ವಿ’

‘ಸಿಂಪಲ್’ ಸುನಿ ಆ್ಯಕ್ಷನ್ ಕಟ್ ಹೇಳುತ್ತಿರುವ  ಬಹುನಿರೀಕ್ಷಿತ ‘ಲಂಬೋದರ 2.0’ ಸಿನಿಮಾದಲ್ಲಿ ಮೇಘನಾ ಗಾಂವ್ಕರ್ ವಿಶಿಷ್ಟ ‘ಸಾಧ್ವಿ’ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ತಮ್ಮ ಪಾತ್ರದ ಕುರಿತು ಮಾಹಿತಿ ಹಂಚಿಕೊಂಡಿರುವ ಮೇಘನಾ, “ಚಿತ್ರದಲ್ಲಿ ಸಾಧ್ವಿ ಪಾತ್ರ  ಸದಾ ಸಂತೋಷ, ಜೀವನ ಮತ್ತು ಆಂತರಿಕ ಶಾಂತಿಯ ಬಗ್ಗೆ ಮಾತನಾಡುತ್ತದೆ.  ಕಳೆದ ಕೆಲವು ವರ್ಷಗಳಿಂದ ನನ್ನ ವೈಯಕ್ತಿಕ ಬದುಕಿನಲ್ಲಿಯೂ ಒಂದು ಬಗೆಯ ನೆಮ್ಮದಿ ಹಾಗೂ ಆಂತರಿಕ ಶಾಂತಿ ದೊರೆತಿದೆ.  ನಿರ್ದೇಶಕ ಸುನಿ ಬಹುಶಃ ನನ್ನ ನೈಜ ವ್ಯಕ್ತಿತ್ವವನ್ನು ಸೂಕ್ಷ್ಮವಾಗಿ ಗಮನಿಸಿ  ಈ ವಿಶಿಷ್ಟ ಪಾತ್ರಕ್ಕೆ ನನ್ನನ್ನು ಆಯ್ಕೆ ಮಾಡಿರಬಹುದು” ಎಂದು ತಿಳಿಸಿದ್ದಾರೆ.

”ದೇಶಾದ್ಯಂತ ಇರುವ ನೈಜ ಸಾಧ್ವಿಗಳ ಛಾಯಾಚಿತ್ರಗಳನ್ನು ಪರಿಶೀಲಿಸಿ ಇಂದಿನ ಕಾಲಘಟ್ಟಕ್ಕೆ ತಕ್ಕಂತೆ ಹೊಸ ರೂಪ ಕೊಡಲು ನಿರ್ಧರಿಸಿದೆವು.   ಸಾಂಪ್ರದಾಯಿಕ ಬಿಳಿ ವಸ್ತ್ರ ತೊಡಿಸುವ ಬದಲು ತಿಳಿ ಕೇಸರಿ ಬಣ್ಣದ ಶೇಡ್ಸ್ ಉಡುಪು ಆರಿಸಿಕೊಂಡೆವು. ಕ್ರಿಂಪ್ಡ್ ಹೇರ್ ಹಾಗೂ ನ್ಯಾಚುರಲ್ ಮೇಕಪ್ ಮೂಲಕ ಇಂದಿನ ಯುವ ಪೀಳಿಗೆಗೂ ಪಾತ್ರ ಆಕರ್ಷಕವಾಗಿ ಹೊಸತನದಿಂದ ಕಾಣುವಂತೆ ವಿನ್ಯಾಸಗೊಳಿಸಿದ್ದೇವೆ” ಎಂದು ವಿವರಿಸಿದ್ದಾರೆ.

“ನನ್ನ ಗುರಿ ಕೇವಲ ಗ್ಲಾಮರಸ್ ನಾಯಕಿಯಾಗಿ ಅಥವಾ ತೆರೆಯ ಮೇಲೆ ಯಾರದ್ದೋ ಪ್ರೇಯಸಿಯಾಗಿ ನಟಿಸುವುದಷ್ಟೇ ಅಲ್ಲ.  ಸಾಧ್ವಿಯ ಪಾತ್ರ ಮಾಡುವುದು ಸಂತೋಷ ಮತ್ತು ನೆಮ್ಮದಿಯ ಜೀವನದ ಬಗ್ಗೆ ಬೋಧನೆ ನೀಡುವುದು ನನಗೆ ಸಹಜ ಮುನ್ನಡೆಯಂತೆ ಅನ್ನಿಸಿತು. ಏಕೆಂದರೆ ವೈಯಕ್ತಿಕವಾಗಿ  ನಾನು ಈಗ ಬದುಕಿನ ಅದೇ ಶಾಂತಿಯುತ ಹಂತದಲ್ಲಿದ್ದೇನೆ” ಎಂದು ಹೇಳಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!