ಕೃಷ್ಣನ್ ಲವ್ ಸ್ಟೋರಿ

ಕೃಷ್ಣನ್ ಲವ್ ಸ್ಟೋರಿ ಚಿತ್ರದ ಸೀಕ್ವೆಲ್ ಅನೌನ್ಸ್

2010 ರಲ್ಲಿ ಯಶಸ್ಸು ಕಂಡಿದ್ದ ಕೃಷ್ಣನ್ ಲವ್ ಸ್ಟೋರಿ ಚಿತ್ರದ ಸೀಕ್ವೆಲ್ 16 ವರ್ಷಗಳ ಬಳಿಕ ಅನೌನ್ಸ್ ಆಗಿದೆ.

ಶಶಾಂಕ್ ನಿರ್ದೇಶನ ಹಾಗೂ ಅಜೇಯ್ ರಾವ್ ಕಾಂಬಿನೇಷನ್ನಲ್ಲಿ ಚಿತ್ರ ಮೂಡಿಬರಲಿದೆ. ಗೀತಾಳನ್ನು ಕಳೆದುಕೊಂಡ ನಾಯಕ ಕೃಷ್ಣನ ಜೀವನದಲ್ಲಿ 16 ವರ್ಷಗಳಲ್ಲಿ ಏನಾಯ್ತು? ಜೀವನ ಯಾವ ರೀತಿ ತಿರುಗಿ ಪಡೆಯಿತು ಎನ್ನುವುದನ್ನು ಹೇಳಲಾಗುತ್ತಿದೆ ಎಂದು ನಿರ್ದೇಶಕ ಶಶಾಂಕ್ ಹೇಳಿದ್ದಾರೆ.

4 ವರ್ಷಗಳ ಹಿಂದೆಯೇ ಸೀಕ್ವೆಲ್ ಬಗ್ಗೆ ಯೋಜನೆ ರೂಪಿಸಲಾಗಿತ್ತು. ಆದರೆ ನಾನು ಬಿಡುವು ಇದ್ದಾಗ ಅಜೇಯ್ ರಾವ್ ಬ್ಯುಸಿ ಇದ್ದರು. ಈಗ ಕಾಲ ಕೂಡಿ ಬಂದಿದೆ. ಈಗ ಪ್ರೀ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು ನವೆಂಬರ್ ನಿಂದ ಚಿತ್ರೀಕರಣ ಆರಂಭವಾಗಲಿದೆ ಎಂದು ಹೇಳಿದ್ದಾರೆ.

ಸ್ವೀಕ್ವೆಲ್ ಮಾಡುವುದು ಕಷ್ಟ ಇರುತ್ತದೆ. ಆದರೆ ಟೈಟಲ್ ಬೇಗ ಜನರನ್ನು ತಲುಪುತ್ತವೆ. ಮೊದಲ ಭಾಗದಲ್ಲಿ ಕೃಷ್ಣನ ಕಥೆ ಮುಗಿದಿರಲಿಲ್ಲ. ಇನ್ನೊಂದು ಅದ್ಭುತ ಕಥೆ ಇದೆ ಎಂದು ಅನಿಸಿ ಕತೆ ಮಾಡುತ್ತಿದ್ದೇವೆ. ಕೆಲವು ಪ್ರೇಮಗಳು ಮುಗಿಯುವುದಿಲ್ಲ. ಕೆಲವು ನೋವುಗಳು ಮರೆಯಾಗುವುದಿಲ್ಲ ಎಂದು ಹೇಳಿದ್ದಾರೆ.

ಈ ಚಿತ್ರದಲ್ಲಿ ಉಮಾಶ್ರೀ, ಅಚ್ಚುತ್ ಕುಮಾರ್ ನಟಿಸಲಿದ್ದಾರೆ. ಅರ್ಜುನ್ ಜನ್ಯ ಸಂಗೀತ, ಅಭಿಲಾಶ್ ಕಳತ್ತಿ ಛಾಯಾಗ್ರಹಣ, ಮಹಾದೇವಯ್ಯ ಹಿರೇಮಠ ಸಂಕಲನ ಇರಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!