ಶಾರುಖ್ ಖಾನ್ ಅಭಿನಯದ ಬಹುನಿರೀಕ್ಷಿತ ‘ಕಿಂಗ್’ ಸಿನಿಮಾ ಡಿಸೆಂಬರ್ 24ರಂದು ಚಿತ್ರ ವಿಶ್ವದಾದ್ಯಂತ ತೆರೆ ಕಾಣಲಿದೆ.
ಅಭಿಮಾನಿಗಳೊಂದಿಗೆ ಎಕ್ಸ್ ಖಾತೆಯಲ್ಲಿ ನಡೆಸಿದ ಸಂವಾದದ ವೇಳೆ ಶಾರುಖ್ ಖಾನ್ ಸಿನಿಮಾದ ಬಿಡುಗಡೆಯನ್ನು ಖಚಿತಪಡಿಸಿದ್ದಾರೆ. ಡಿಸೆಂಬರ್ 24ರೊಳಗೆ ಅಭಿಮಾನಿಗಳ ಮುಂದೆ ಬರಲಿದೆ ಎಂದು ತಿಳಿಸಿದ್ದಾರೆ.
‘ಕಿಂಗ್’ ಚಿತ್ರದ ಟ್ರೇಲರ್ ಬಿಡುಗಡೆ ಮಾಡುವಂತೆ ಅಭಿಮಾನಿ ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಶಾರುಖ್, ಸದ್ಯಕ್ಕೆ ಮಾತುಕತೆ ನಡೆಯುತ್ತಿದೆ.ಟ್ರೇಲರ್ ನಂತರ ಬರಲಿದೆ. ಸಿನಿಮಾ ಬಿಡುಗಡೆಗೆ ಇನ್ನೂ ಸಮಯವಿದ್ದು, ಸ್ವಲ್ಪ ತಾಳ್ಮೆಯಿಂದಿರಿ ಎಂದು ಹೇಳಿದ್ದಾರೆ.
ಈ ಬಾರಿ ‘ಕಿಂಗ್’ಗೆ ಹಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾಗಳ ಸ್ಪರ್ಧೆ ಎದುರಾಗಲಿದೆ. ಡಿಸೆಂಬರ್ 18ರಂದು ‘ಅವೆಂಜರ್ಸ್: ಡೂಮ್ಸ್‌ಡೇ’ ಹಾಗೂ ‘ಡ್ಯೂನ್: ಪಾರ್ಟ್ 3’ ಸಿನಿಮಾಗಳು ತೆರೆಗೆ ಬರಲಿವೆ. ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಮಾರ್ವೆಲ್ ಸಿನಿಮಾಗಳಿಗೆ ದೊಡ್ಡ ಮಟ್ಟದ ಬೇಡಿಕೆ ಇರುವ ಹಿನ್ನೆಲೆಯಲ್ಲಿ ‘ಕಿಂಗ್’ ಬಿಡುಗಡೆ ಕುತೂಹಲ ಮೂಡಿಸಿದೆ.
ಕ್ರಿಸ್‌ಮಸ್ ಹಾಗೂ ವರ್ಷಾಂತ್ಯದ ರಜಾ ದಿನಗಳ ಲಾಭ ಪಡೆಯುವ ಉದ್ದೇಶದಿಂದ ‘ಕಿಂಗ್’ ಚಿತ್ರವನ್ನು ಡಿಸೆಂಬರ್ 24ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಹಾಲಿವುಡ್‌ನ ದೊಡ್ಡ ಸಿನಿಮಾಗಳ ನಡುವೆ ಶಾರುಖ್ ಖಾನ್ ಸಿನಿಮಾ ಹೇಗೆ ಪ್ರದರ್ಶನ ನೀಡಲಿದೆ ಎಂಬುದು ಇದೀಗ ಸಿನಿಪ್ರಿಯರ ಗಮನ ಸೆಳೆದಿದೆ.
—-





Be the first to comment