80ರ ಕಾಲಘಟ್ಟದ ‘ಬೊಮ್ ಭಾಯ್’ ಮುಹೂರ್ತ

ಶರಣ್, ದಿಗಂತ್, ಶ್ವಿಕಾ ನಾಯ್ಡು  ಪ್ರಮುಖಪಾತ್ರದಲ್ಲಿ ಅಭಿನಯಿಸುತ್ತಿರುವ 80 ರ ಕಾಲಘಟ್ಟದ ಕಥೆಯ ‘ಬೊಮ್ ಭಾಯ್’  ಚಿತ್ರದ ಮುಹೂರ್ತ ನಡೆದಿದೆ.

ವಿಂಧ್ಯಾ ಬಾಲಾಜಿ ಪೋತರಾಜ್ ಹಾಗೂ ಕಾಂತರಾಜ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಶಶಿಧರ್ ನಿರ್ದೇಶಿಸುತ್ತಿದ್ದಾರೆ. ಗಣೇಶನ ಹಬ್ಬದಂದು  ಚಿತ್ರ ಆರಂಭವಾಗಿದೆ.

“ಬೊಮ್ ಭಾಯ್” ಚಿತ್ರದ ಪೋಸ್ಟರ್ ತುಂಬಾ ಚೆನ್ನಾಗಿದೆ. ನನ್ನ ಹಿಂದಿನ ಯಾವ ಚಿತ್ರಗಳಲ್ಲಿ ಅಭಿನಯಿಸಿರದ ಪಾತ್ರ ಇದಾಗಿದೆ‌. ಶಶಿಧರ್ ಒಂದೊಳ್ಳೆ ಕಥೆ ಮಾಡಿದ್ದಾರೆ. ಈ ಚಿತ್ರದಲ್ಲಿ ನಗುವೇ ಪ್ರಧಾನ. ಈಗ  80s ಟ್ರೆಂಡ್ ಜೋರಾಗಿದೆ. ಈ ಟ್ರೆಂಡ್ ಶುರುವಾಗುವುದಕ್ಕೂ ಮುನ್ನ ಈ ಚಿತ್ರದ ಕಥೆ ಸಿದ್ದಾವಾಗಿದೆ. ನಿರ್ಮಾಪಕರಿಗೆ ಇದು ಮೊದಲ ಚಿತ್ರ. ದಿಗಂತ್ ಹಾಗೂ ನಿಶ್ವಿಕಾ ನಾಯ್ಡು ಅವರ ಜೊತೆಗೆ ನಟಿಸುತ್ತಿರುವುದು ಖುಷಿಯಾಗಿದೆ’ ಎಂದು ಶರಣ್ ತಿಳಿಸಿದ್ದಾರೆ.

“ಬೊಮ್ ಭಾಯ್” ರೆಟ್ರೊ ಶೈಲಿಯ ಕಥೆ. ನನ್ನ ಪಾತ್ರ  ತುಂಬಾ ಚೆನ್ನಾಗಿದೆ. ನಾನು  ಈವರೆಗೂ ಈ ತರಹದ ಪಾತ್ರ ಮಾಡಿಲ್ಲ. ಶಶಿಧರ್ ಅವರು ಹೇಳಿದ ಕಥೆ ಬಹಳ ಇಷ್ಟವಾಯಿತು. ಚಿತ್ರ ಎಲ್ಲರಿಗೂ ಇಷ್ಟವಾಗುವ ಭರವಸೆ ಇದೆ’ ಎಂದು ದಿಗಂತ್ ಹೇಳಿದ್ದಾರೆ.

‘ ಶಶಿಧರ್ ಉತ್ತಮ ಮನೋರಂಜನೆಯ ಕಥೆಯನ್ನು ಸಿದ್ದ ಮಾಡಿಕೊಂಡಿದ್ದಾರೆ. ಕಥೆ ಬಹಳ ಇಷ್ಟವಾಯಿತು. “ಗುರು ಶಿಷ್ಯರು” ಚಿತ್ರದ ನಂತರ ಶರಣ್ ಅವರ ಜೊತೆಗೆ ಅಭಿನಯಿಸುತ್ತಿದ್ದೇನೆ. ಶರಣ್ ಹಾಗೂ ದಿಗಂತ್ ಅವರ ಜೊತೆಗೆ ನಟಿಸುತ್ತಿರುವುದು ಖುಷಿಯಾಗಿದೆ’ ಎಂದು ನಿಶ್ವಿಕಾ ನಾಯ್ಡು ತಿಳಿಸಿದ್ದಾರೆ.

‘ಇದು ನನ್ನ ನಿರ್ದೇಶನದ ಮೂರನೇ ಚಿತ್ರ. ಶರಣ್, ದಿಗಂತ್ ಹಾಗೂ ನಿಶ್ವಿಕಾ ನಾಯ್ಡು ಮೂರು ಮುಖ್ಯ ಪಾತ್ರಗಳ ಸುತ್ತ ಈ ಚಿತ್ರದ ಕಥೆ ಸಾಗುತ್ತದೆ. ಕನ್ನಡದ ಜನಪ್ರಿಯ ಕಲಾವಿದರು ಈ ಚಿತ್ರದಲ್ಲಿ ನಟಿಸಲಿದ್ದಾರೆ‌. ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ. ಸಂಪೂರ್ಣ ಕಾಮಿಡಿ ಜಾನರ್ ನ ಚಿತ್ರ ಇದಾಗಿದೆ. ದೀಪಕ್  ಚಿತ್ರದ ಛಾಯಾಗ್ರಹಕರು’ ಎಂದು ನಿರ್ದೇಶಕ ಶಶಿಧರ್ ಹೇಳಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!