ನಾಗ ಮಹೇಶ್

‘ಒರಿಜಿನಲ್ ಮಾನ್ ಸ್ಟರ್’ ಚಿತ್ರದಲ್ಲಿ ತೆಲುಗು ನಟ ನಾಗ ಮಹೇಶ್!

ತೆಲುಗು ಚಿತ್ರರಂಗದಲ್ಲಿ ತಮ್ಮ ವೈವಿಧ್ಯಮಯ ಅಭಿನಯದ ಮೂಲಕ ಗಮನಸೆಳೆದಿರುವ ಖ್ಯಾತ ನಟ ನಾಗ ಮಹೇಶ್ ಅವರು ಇದೀಗ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಲು ಸಜ್ಜಾಗಿದ್ದಾರೆ. ಪ್ರಸಿದ್ಧ ನಿರ್ದೇಶಕ ಆರ್. ಚಂದ್ರು ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ‘ಒರಿಜಿನಲ್ ಮಾನ್ ಸ್ಟರ್’ (OM) ಚಿತ್ರದ ಮೂಲಕ ಅವರು ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ.

‘ರಂಗಸ್ಥಲಂ’, ‘ಉಪ್ಪೇನ’ ಹಾಗೂ ‘ಅಖಂಡ’ದಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ತಮ್ಮ ಅದ್ಭುತ ನಟನೆಯ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ನಾಗ ಮಹೇಶ್, ತೆಲುಗು ಚಿತ್ರರಂಗದಲ್ಲಿ ತಮಗಾಗಿಯೇ ಒಂದು ವಿಶಿಷ್ಟ ಗುರುತನ್ನು ಗಿಟ್ಟಿಸಿಕೊಂಡಿದ್ದಾರೆ. ತಮ್ಮ ಅನುಭವ ಹಾಗೂ ಪ್ರಬಲ ಅಭಿನಯದ ಮೂಲಕ ಅವರು ‘ಒರಿಜಿನಲ್ ಮಾನ್ಸ್ಟರ್’ ಚಿತ್ರದ ಪಾತ್ರಕ್ಕೆ ಮತ್ತಷ್ಟು ಮೆರುಗು ನೀಡಲಿದ್ದಾರೆ. ಕನ್ನಡದ ಪ್ರೇಕ್ಷಕರಿಗೆ ಸಂಪೂರ್ಣ ವಿಭಿನ್ನ ಹಾಗೂ ಹೊಸ ಮಾದರಿಯ ಪಾತ್ರದ ಮೂಲಕ ಅವರು ಪರಿಚಯವಾಗಲಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ಸಿನಿಮಾಗಳನ್ನು ನೀಡಿದ ನಿರ್ದೇಶಕ ಆರ್. ಚಂದ್ರು ಹಾಗೂ ನಾಗ ಮಹೇಶ್ ಅವರ ಈ ಮೊದಲ ಕಾಂಬಿನೇಷನ್ ಚಲನಚಿತ್ರ ಪ್ರೇಮಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ನಾಗ ಮಹೇಶ್ ಅವರ ಸ್ಯಾಂಡಲ್‌ವುಡ್ ಪಯಣಕ್ಕೆ ಅದ್ಧೂರಿ ಚಾಲನೆ ಸಿಕ್ಕಂತಾಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!