ಜಾಕಿ 42

‘ಜಾಕಿ 42’ ಚಿತ್ರಕ್ಕೆ U/A ಸರ್ಟಿಫಿಕೇಟ್

ಕಿರಣ್ ರಾಜ್ ನಾಯಕನಾಗಿ ನಟಿಸಿರುವ ‘ಜಾಕಿ 42’ ಚಿತ್ರಕ್ಕೆ  ಸೆನ್ಸಾರ್ ಮಂಡಳಿ U/A ಪ್ರಮಾಣ ಪತ್ರ ನೀಡಿದೆ.

ಗುರುತೇಜ್ ಶೆಟ್ಟಿ ನಿರ್ದೇಶನ ಹಾಗೂ ಗೋಲ್ಡನ್ ಗೇಟ್ ಬ್ಯಾನರ್ ಅಡಿಯಲ್ಲಿ ಭಾರತಿ ಸತ್ಯನಾರಾಯಣ್ ನಿರ್ಮಾಣದ ‘ಜಾಕಿ 42  ಪೂರ್ಣಪ್ರಮಾಣದಲ್ಲಿ ಹಾರ್ಸ್ ರೇಸ್ ಹಿನ್ನೆಲೆಯಲ್ಲಿ ಬರುತ್ತಿರುವ ಮೊದಲ ಭಾರತೀಯ ಚಿತ್ರ ಎನ್ನಲಾಗುತ್ತಿದೆ. . ಇದು ಕುದುರೆ ರೇಸ್ ಹಿನ್ನೆಲೆಯಲ್ಲಿ ನಡೆಯುವ ಕಥೆಯಾಗಿದ್ದು ಫ್ಯಾಮಿಲಿ ಎಮೋಷನ್  ಚಿತ್ರದಲ್ಲಿ ಗಮನ ಸೆಳೆದಿದೆ.

ಸದ್ಯದಲ್ಲೇ ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆಯಾಗಲಿದೆ. ಇತ್ತೀಚಿಗೆ ‘ಟಾಕ್ಸಿಕ್’ ಚಿತ್ರದೊಂದಿಗೆ ‘ಜಾಕಿ 42’ ಥಿಯೇಟ್ರಿಕಲ್ ಟ್ರೈಲರ್ ಬಿಡುಗಡೆ ಮಾಡಿ ಪ್ರೇಕ್ಷಕರ  ಗಮನ ಸೆಳೆದಿದೆ.

ಕಿರಣ್ ರಾಜ್ , ಹೃತಿಕ ಶ್ರೀನಿವಾಸ್ ,ಯುಕ್ತ ಶೆಟ್ಟಿ, ರಾಜೇಂದ್ರ ಕಾರಂತ್,ಬಾಲರಾಜ್ ವಾಡೆ, ಗಿರೀಶ್ ಹೆಗ್ಡೆ ,ದೀಪಕ್ ರೈ ಅರುಣ್ ಆಚಾರ್, ಶಾಂತಲ ಕಾಮತ್ ಮುಂತಾದ ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ.

ರಾಘವೇಂದ್ರ ಬಿ ಕೋಲಾರ ಛಾಯಾಗ್ರಹಣ, ಉಮೇಶ್ ಆರ್ ಬಿ ಸಂಕಲನ , ವಿನೋದ್ ಯಜಮಾನ್ಯ ಸಂಗೀತ ನಿರ್ದೇಶನ ಹಾಗೂ ಭೂಷಣ್ ಅವರ ನೃತ್ಯ ನಿರ್ದೇಶನ ‘ಜಾಕಿ 42’ ಚಿತ್ರಕ್ಕಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!