ಬಹುಭಾಷಾ ಕಿರುಚಿತ್ರ ‘MAGICC’ (ಮ್ಯಾಜಿಕ್) ಈಗ ‘ರಿಷಬ್ ಶೆಟ್ಟಿ ಫಿಲ್ಮ್ಸ್’ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ.
ನವನಿರ್ದೇಶಕ ಶಿವಚಿರಂತನ ನಿರ್ದೇಶನದ ಈ ಚಿತ್ರದ ಮೂಲಕ ಆದಿತ್ಯ ಬಿ ಪೂಜಾರ್ ನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. 5ಭಾಷೆಗಳಲ್ಲಿ ಬಿಡುಗಡೆಯಾಗಿರುವ ಈ ಕಿರುಚಿತ್ರ ಶಬ್ದ ಮತ್ತು ಆತ್ಮಾವಲೋಕನದ ಸುತ್ತ ಸಾಗುವ ಕಥಾಹಂದರವನ್ನು ಹೊಂದಿದೆ.
ಖ್ಯಾತ ಬರಹಗಾರ ಜೋಗಿ (ಗಿರೀಶ್ ರಾವ್ ಹತ್ವಾರ್) ಕಿರುಚಿತ್ರಕ್ಕೆ ಕಥೆ ಬರೆದಿದ್ದಾರೆ. ರಿಷಬ್ ಶೆಟ್ಟಿ, ವಿ ರವಿ ಕುಮಾರ್, ಆದಿತ್ಯ ಬಿ ಪೂಜಾರ್ ಮತ್ತು ಶಿವಚಿರಂತನ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ‘ಮನ್ಪ್ರಸಾದ್ ಕ್ರಿಯೇಷನ್ಸ್’ ಮತ್ತು ‘ಷಟ್ಟರ್ ಸ್ಪೇಸ್’ ಸಹ-ನಿರ್ಮಾಣ ಮಾಡಿವೆ.
ಭುವನ್ ರೆಡ್ಡಿ ಛಾಯಾಗ್ರಹಣ, ನಚಿಕೇತ್ ಶರ್ಮಾ ಸಂಗೀತ, ಗೌತಮ್ ಸರಟೂರ್ ಸಂಕಲನ, ರಾಷ್ಟ್ರ ಪ್ರಶಸ್ತಿ ವಿಜೇತ ಎಂ ಆರ್ ರಾಜಕೃಷ್ಣನ್ ಅವರ ಧ್ವನಿ ವಿನ್ಯಾಸ ಚಿತ್ರಕ್ಕಿದೆ. ರಮೇಶ್ ಸಿ ಪಿ ಅವರ ವರ್ಣವಿನ್ಯಾಸ, ಧರಣಿ ಗಂಗೆಪುತ್ರ ಅವರ ಕಲಾ ನಿರ್ದೇಶನ, ರೋಹಿತ್ ಚಿಕ್ಕಮಗಳೂರು ಅವರ ಪೋಸ್ಟ್ ಪ್ರೊಡಕ್ಷನ್ ಮೇಲ್ವಿಚಾರಣೆ, ಅನೀಶ್ ಶರ್ಮಾ ಮತ್ತು ಪಟಾ ಪೋಸ್ಟರ್ಸ್ ಅವರ ಪೋಸ್ಟರ್ ವಿನ್ಯಾಸ ಚಿತ್ರಕ್ಕಿದೆ.
—-





Be the first to comment