ಶಿವರಾಜ್‌ಕುಮಾರ್ ಅಭಿನಯದ ಭಕ್ತಿಪ್ರಧಾನ ಹಾಗೂ ಸಾಹಸಮಯ ಸಿನಿಮಾ ‘ಕೂರ್ಮಾವತಾರ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ.
ಪೌರಾಣಿಕ ಹಿನ್ನೆಲೆ, ಆಧ್ಯಾತ್ಮಿಕತೆ ಮತ್ತು ಭರ್ಜರಿ ಸಾಹಸ ದೃಶ್ಯಗಳ ಸಮ್ಮಿಶ್ರಣವಾಗಿ ಮೂಡಿಬಂದಿರುವ ಟೀಸರ್ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಟೀಸರ್‌ನ ಭಕ್ತಿಪ್ರಧಾನ ವಾತಾವರಣ, ಆಕರ್ಷಕ ನಿರೂಪಣೆ, ದೃಶ್ಯ ವೈಭವ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ.
ಆಧ್ಯಾತ್ಮಿಕ ಶೈಲಿಯಲ್ಲಿ ಆರಂಭವಾಗುವ ಟೀಸರ್‌ನಲ್ಲಿ ನಟ ಸಾಯಿ ಕುಮಾರ್ ಅವರ ಹಿನ್ನೆಲೆ ಧ್ವನಿ ಇದೆ. ಯುಗ ಯುಗಗಳಲ್ಲಿ ದೇವರ ಮಹತ್ವ, ಭಕ್ತಿ ಮತ್ತು ಧರ್ಮದ ಕುರಿತು ವಿವರಿಸಲಾಗಿದೆ. ಅಸಾಧಾರಣ ಶಕ್ತಿಗಳೊಂದಿಗೆ ದುಷ್ಟ ಶಕ್ತಿಗಳು ತಲೆಯೆತ್ತಿ, ವಿಶ್ವದ ಸಮತೋಲನವನ್ನು ಹಾಳುಮಾಡಲು ಯತ್ನಿಸಿದಾಗ ಧರ್ಮವನ್ನು ರಕ್ಷಿಸಲು ದಿವ್ಯ ಯೋಧನಾಗಿ ನಾಯಕನ ಎಂಟ್ರಿ ಆಗುತ್ತದೆ.
ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಪ್ರಮುಖ ಪಾತ್ರ ಮಾಡಿದ್ದಾರೆ. ಸಾಯಿ ಕುಮಾರ್, ವರಲಕ್ಷ್ಮಿ ಶರತ್‌ಕುಮಾರ್ ಮುಂತಾದವರು ನಟಿಸಿದ್ದಾರೆ. ಹರ್ಷವರ್ಧನ್ ಕಡಿಯಾಲ ನಿರ್ದೇಶನದ ಈ ಚಿತ್ರವನ್ನು ಪಂಚವಕ್ತ್ರ ಪಿಕ್ಚರ್ಸ್ ಮತ್ತು ರುಕ್ವಿನಾ ಸ್ಟುಡಿಯೋಸ್ ಬ್ಯಾನರ್‌ಗಳಡಿಯಲ್ಲಿ ಪೂಜಿತಾ ಕೆ. ಹಾಗೂ ಕೆ. ಸೇವಿತಾ ನಿರ್ಮಿಸಿದ್ದಾರೆ. ಜಗದೀಶ್ ಚೀಕಟಿ ಅವರ ಛಾಯಾಗ್ರಹಣ , ಬಿ. ಅಜನೀಶ್ ಲೋಕನಾಥ್ ಅವರ ಹಿನ್ನೆಲೆ ಸಂಗೀತ ಇದೆ.





Be the first to comment