ಸ್ಯಾಂಡಲ್ ವುಡ್ ಹಾಸ್ಯ ನಟ ಚಿಕ್ಕಣ್ಣ ಮಂಡ್ಯ ಮೂಲದ ಪಾವನಾ ಅವರನ್ನು ಕೈಹಿಡಿದಿದ್ದಾರೆ.
ಮೈಸೂರಿನ ಪ್ರಸಿದ್ಧ ಸ್ಪೆಕ್ಟ್ರಾ ಕನ್ವೆನ್ಷನ್ ಸೆಂಟರ್ನಲ್ಲಿ ಇವರಿಬ್ಬರ ವಿವಾಹ ಅದ್ಧೂರಿಯಾಗಿ ನೆರವೇರಿದೆ. ಕುಟುಂಬಸ್ಥರು, ಆಪ್ತರು ಹಾಗೂ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ವಿವಾಹ ಸಮಾರಂಭ ನೆರವೇರಿದೆ. ಚಿಕ್ಕಣ್ಣ–ಪಾವನಾ ಜೋಡಿಗೆ ಅಭಿಮಾನಿಗಳು ಹಾಗೂ ಸಿನಿ ತಾರೆಯರು ಶುಭ ಹಾರೈಸಿದ್ದಾರೆ.
ಸಮಾರಂಭದಲ್ಲಿ ಡಾಲಿ ಧನಂಜಯ್, ತಾರಾ ಅನುರಾಧ, ಶ್ರೀಮುರಳಿ, ರಂಗಾಯಣ ರಘು, ಮೇಘನಾ ಗಾಂವ್ಕರ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಭಾಗಿಯಾಗಿ ನವಜೋಡಿಗೆ ಶುಭ ಹಾರೈಸಿದರು. ನವದಂಪತಿಗೆ ಸಿನಿರಂಗ ಹಾಗೂ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ಪಾವನಾ ಗೌಡ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದು, ಪರಿಸರ ಸ್ನೇಹಿ ಉದ್ಯಮ ನಡೆಸುತ್ತಿದ್ದಾರೆ. ಚಿತ್ರರಂಗದಲ್ಲಿ ಹಾಸ್ಯನಟನಾಗಿ ವಿಶಿಷ್ಟ ಛಾಪು ಮೂಡಿಸಿರುವ ಚಿಕ್ಕಣ್ಣ ಹಲವು ವರ್ಷಗಳಿಂದ ತಮ್ಮ ವಿಭಿನ್ನ ಹಾಸ್ಯ ಶೈಲಿಯ ಮೂಲಕ ಕನ್ನಡ ಸಿನಿಪ್ರೇಕ್ಷಕರ ಮನ ಗೆದ್ದಿದ್ದಾರೆ.
—-





Be the first to comment