ಸಲ್ಮಾನ್ ಹೊಸ ಸಿನಿಮಾ ‘ಮಾನ್‌ಸ್ಟರ್’

ಸಲ್ಮಾನ್ ಖಾನ್ ಮತ್ತು ನಯನತಾರಾ ಅಭಿನಯದ ಹೊಸ ಆಕ್ಷನ್ ಥ್ರಿಲ್ಲರ್ ಸಿನಿಮಾಗೆ ‘ಮಾನ್‌ಸ್ಟರ್’ ಎಂದು ಹೆಸರಿಡಲಾಗಿದೆ.

ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜು ಹಾಗೂ ನಿರ್ದೇಶಕ ವಂಶಿ ಪೈಡಿಪಲ್ಲಿ ಕಾಂಬಿನೇಷನ್‌ನಲ್ಲಿ ಈ  ಚಿತ್ರ ಮೂಡಿ ಬರುತ್ತಿದೆ. ಸಿನಿಮಾದಲ್ಲಿ ಸಲ್ಮಾನ್ ಖಾನ್ ಮತ್ತು ನಯನತಾರಾ ಜೊತೆಗೆ ಸಾಗರಿಕ ಘಾಟ್ಗೆ ಹಾಗೂ ಮುಜಮ್ಮಿಲ್ ಇಬ್ರಾಹಿಂ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.  ‘ಎಸ್‌ವಿಸಿ 63’ ಪ್ರಾಜೆಕ್ಟ್ ಆಗಿ ಆರಂಭವಾಗಿದ್ದ ಈ ಚಿತ್ರಕ್ಕೆ ‘ಮಾನ್‌ಸ್ಟರ್’ ಶೀರ್ಷಿಕೆಯನ್ನು ಇಡಲಾಗಿದ್ದು, ಶೀಘ್ರದಲ್ಲೇ ಚಿತ್ರತಂಡದಿಂದ ಅಧಿಕೃತ ಪ್ರಕಟಣೆ ಹೊರ ಬೀಳಲಿದೆ.

ಸಿನಿಮಾದ ಶೂಟಿಂಗ್ ವೇಳೆ ಸಲ್ಮಾನ್ ಖಾನ್ ಅವರ  ಡ್ಯೂಪ್ ಹೃದಯಾಘಾತಕ್ಕೆ ಒಳಗಾಗಿದ್ದರು.  ಶೂಟಿಂಗ್ ಹಂತಕ್ಕೆ ಯಾವುದೇ ತೊಂದರೆ ಆಗಬಾರದು ಎಂದು ಸಲ್ಮಾನ್ ಖಾನ್ ಅವರೇ ಖುದ್ದಾಗಿ ಅಪಾಯಕಾರಿ ಆಕ್ಷನ್ ದೃಶ್ಯಗಳಲ್ಲಿ ನಟಿಸುತ್ತಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದ ಆಕ್ಷನ್ ದೃಶ್ಯಗಳನ್ನು ಸೇರಿಸಲು ಕೊರಿಯಾದ ಖ್ಯಾತ ಸಾಹಸ ನಿರ್ದೇಶಕ ಸಿ ಯಂಗ್ ಓ ಅವರನ್ನು ಕರೆಸಲಾಗಿದೆ. ಮಿಷ್ಟರ್ ಓ ಎಂದೇ ಪ್ರಸಿದ್ಧರಾಗಿರುವ ಇವರು ಹಿಂದೆ ‘ಕಿಲ್’ ಮತ್ತು ‘ವಾರ್’ ಸಿನಿಮಾಗಳಿಗೆ ಸಾಹಸ ನಿರ್ದೇಶನ ಮಾಡಿದ್ದರು. ಸಲ್ಮಾನ್ ಖಾನ್ ಅವರ ಮಾಸ್ ಇಮೇಜ್‌ಗೆ ತಕ್ಕಂತೆ ಅದ್ಭುತ ಆಕ್ಷನ್ ದೃಶ್ಯಗಳನ್ನು ಇವರು ವಿನ್ಯಾಸಗೊಳಿಸುತ್ತಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!