‘ಟಾಕ್ಸಿಕ್’ ಟಿಕೆಟ್‌ ಸೋಲ್ಡ್‌ ಔಟ್

ರಾಕಿಂಗ್‌ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಮುಂಗಡ ಟಿಕೆಟ್‌ ಬುಕಿಂಗ್‌  ಗೆಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬೆಂಗಳೂರಿನ ಹಲವು ಚಿತ್ರಮಂದಿರಗಳ ಮೊದಲ ದಿನದ ಪ್ರದರ್ಶನಗಳ ಟಿಕೆಟ್‌ಗಳು  ಸೋಲ್ಡ್‌ ಔಟ್ ಆಗಿವೆ.

ಟಿಕೆಟ್‌ ಬುಕಿಂಗ್‌ ವಿಂಡೋ ತೆರೆಯುತ್ತಿದ್ದಂತೆಯೇ ಯಶ್‌ ಅಭಿಮಾನಿಗಳು ಮುಂಗಡ ಟಿಕೆಟ್‌ ಕಾಯ್ದಿರಿಸಲು ಮುಗಿಬಿದ್ದಿದ್ದಾರೆ. ಬೆಂಗಳೂರಿನ ಪ್ರಮುಖ ಮಲ್ಟಿಪ್ಲೆಕ್ಸ್‌ಗಳಲ್ಲಿ ಮೊದಲ ದಿನದ ಹಲವು ಶೋಗಳ ಬಹುತೇಕ ಟಿಕೆಟ್‌ಗಳು ಕೆಲವೇ ನಿಮಿಷಗಳಲ್ಲಿ ಮಾರಾಟವಾಗಿವೆ.

‘ಕೆಜಿಎಫ್‌ 2’ ಬಳಿಕ ಯಶ್‌ ನಟಿಸುತ್ತಿರುವ ಸಿನಿಮಾ ಎಂಬ ಕಾರಣಕ್ಕೆ ‘ಟಾಕ್ಸಿಕ್‌’ ಮೇಲೆ  ಭಾರಿ ನಿರೀಕ್ಷೆ ಇದೆ. ಬುಕಿಂಗ್‌ ಆರಂಭವಾದ ತಕ್ಷಣವೇ ಟಿಕೆಟ್‌ಗಳು ಸೋಲ್ಡ್ ಔಟ್ ಆಗುತ್ತಿರುವುದು ಚಿತ್ರದಮೇಲಿರುವ ಅಭಿಮಾನಿಗಳ ಕ್ರೇಜ್‌ ಎಷ್ಟಿದೆ ಎಂಬುದನ್ನು ಸಾಬೀತುಪಡಿಸಿದೆ.

ಬಿಡುಗಡೆಗೂ ಮುನ್ನ ಮುಂಗಡ ಬುಕಿಂಗ್‌ಗೆ ಸಿಗುತ್ತಿರುವ ಭರ್ಜರಿ ಪ್ರತಿಕ್ರಿಯೆ ಚಿತ್ರತಂಡದ ನಿರೀಕ್ಷೆ ಹೆಚ್ಚಿಸಿದೆ.  ಬಿಡುಗಡೆಯ ಬಳಿಕ ಬಾಕ್ಸ್‌ ಆಫೀಸ್‌ನಲ್ಲಿ ‘ಟಾಕ್ಸಿಕ್‌’ ಹೊಸ ದಾಖಲೆಗಳನ್ನು ನಿರ್ಮಿಸುವ ಸಾಧ್ಯತೆ ಇದೆ.

ಗೀತು ಮೋಹನ್‌ದಾಸ್‌ ನಿರ್ದೇಶನದ ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ನಿರ್ಮಿಸಲಾಗಿದೆ.   ಚಿತ್ರ ಆಗಸ್ಟ್ 26ರಂದು ಬಿಡುಗಡೆಯಾಗುತ್ತಿದೆ.  ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ನಯನತಾರಾ, ತಾರಾ ಸುತಾರಿಯಾ, ಸಂಜೀದಾ ಶೇಖ್ ನಟಿಸಿದ್ದಾರೆ ಚಿತ್ರ ತೆಲುಗು, ತಮಿಳು, ಹಿಂದಿ, ಇಂಗ್ಲಿಷ್ ಮತ್ತು ಮಲಯಾಳಂ ಸೇರಿದಂತೆ ಇತರ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.  ಚಿತ್ರ ಸೆನ್ಸಾರ್ ಮಂಡಳಿಯಿಂದ ಎ ಪ್ರಮಾಣಪತ್ರವನ್ನು ಪಡೆದಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!