ವಿಮಲ್ ಇಲಾಯಚಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಗೆ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (FDA) ಶೋಕಾಸ್ ನೋಟಿಸ್ ನೀಡಿದೆ.
ಶೋಕಾಸ್ ನೋಟಿಸ್ನಿಂದ ಸೆಲೆಬ್ರಿಟಿಗಳು ಆರೋಗ್ಯಕ್ಕೆ ಹಾನಿಕಾರಕ ಎಂದು ಪರಿಗಣಿಸಲಾದ ಉತ್ಪನ್ನಗಳ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸಮರ್ಥನೀಯ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.
ನಿಷೇಧಿತ ಉತ್ಪನ್ನದ ಪರೋಕ್ಷ ಪ್ರಚಾರಕ್ಕೆ ಜಾಹೀರಾತುಗಳು ಕಾರಣವಾಗುತ್ತಿವೆ ಎಂಬುದರ ಕುರಿತು FDA ಯಾವ ಕ್ರಮ ಕೈಗೊಳ್ಳಲಿದೆ, ನಟರು ನೋಟಿಸ್ಗೆ ಯಾವ ರೀತಿಯ ಉತ್ತರ ನೀಡಲಿದ್ದಾರೆ ಎಂದು ಕುತೂಹಲ ಮೂಡಿದೆ.
ಶಾರುಖ್ ಖಾನ್ ಈ ಹಿಂದೆ, ಸರ್ಕಾರಕ್ಕೆ ಆದಾಯ ತಂದುಕೊಡುವ ಉತ್ಪನ್ನಗಳನ್ನು ನಿಷೇಧಿಸದೆ, ಅವುಗಳನ್ನು ಪ್ರಚಾರ ಮಾಡುವ ನಟರ ಆದಾಯದ ಬಗ್ಗೆ ಮಾತ್ರ ಪ್ರಶ್ನೆ ಎತ್ತುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಅಜಯ್ ದೇವಗನ್ , ಉತ್ಪನ್ನ ನಿಜವಾಗಿಯೂ ಹಾನಿಕಾರಕವಾಗಿದ್ದರೆ ಅದರ ತಯಾರಿಕೆ ಮತ್ತು ಮಾರಾಟವನ್ನು ನಿಲ್ಲಿಸಬೇಕು.ಇದರೊಂದಿಗೆ ಗ್ರಾಹಕರ ವೈಯಕ್ತಿಕ ಆಯ್ಕೆಯನ್ನೂ ಪರಿಗಣಿಸಬೇಕು ಎಂದು ಅಭಿಪ್ರಾಯಪಟ್ಟಿದ್ದರು.
ಟೈಗರ್ ಶ್ರಾಫ್ ಈ ವಿವಾದದ ಕುರಿತು ಈವರೆಗೆ ಯಾವುದೇ ಸಾರ್ವಜನಿಕ ಪ್ರತಿಕ್ರಿಯೆ ನೀಡಿಲ್ಲ.
ಇದೇ ಬ್ರ್ಯಾಂಡ್ಗೆ ಸಂಬಂಧಿಸಿದ ಜಾಹೀರಾತಿನಲ್ಲಿ ಈ ಹಿಂದೆ ನಟಿಸಿದ್ದ ಅಕ್ಷಯ್ ಕುಮಾರ್ ಸಾರ್ವಜನಿಕರಿಂದ ತೀವ್ರ ಟೀಕೆ ಎದುರಾದ ಬಳಿಕ ಬ್ರ್ಯಾಂಡ್ನಿಂದ ಹಿಂದೆ ಸರಿದಿದ್ದರು. ಜಾಹೀರಾತಿನಿಂದ ಪಡೆದ ಸಂಭಾವನೆಯನ್ನು ಸತ್ಕಾರ್ಯಕ್ಕೆ ಬಳಸುವುದಾಗಿ ತಿಳಿಸಿ ಕ್ಷಮೆಯಾಚಿಸಿದ್ದರು. ಅಮಿತಾಭ್ ಬಚ್ಚನ್ ಕೂಡ ಇದೇ ರೀತಿಯ ಬ್ರ್ಯಾಂಡ್ಗಳಿಂದ ಹಿಂದೆ ಸರಿದಿದ್ದರು.
—-





Be the first to comment