ರಾಕಿಂಗ್ ಸ್ಟಾರ್ ಯಶ್, ದೇಶದ ಅತ್ಯಂತ ಪ್ರಸಿದ್ಧ ಹಾಗೂ ದೀರ್ಘ ಟಿವಿ ಟಾಕ್ ಶೋ ಎಂದೇ ಪ್ರಖ್ಯಾತಿ ಪಡೆದಿರುವ ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಹಾಟ್ಸೀಟ್ನಲ್ಲಿ ಕೂತ ಮೊದಲ ಕನ್ನಡಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಹಿರಿಯ ಪತ್ರಕರ್ತ ರಜತ್ ಶರ್ಮಾ ನಡೆಸಿ ಕೊಡುವ ‘ಆಪ್ ಕಿ ಅದಾಲತ್’ ದೇಶದ ಅತ್ಯಂತ ಪ್ರಭಾವಿ ವ್ಯಕ್ತಿಗಳು ಮಾತ್ರ ಹಾಟ್ ಸೀಟನಲ್ಲಿ ಕಠಿಣ ಪ್ರಶ್ನೆಗಳನ್ನು ಎದುರಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ,ಬಾಲಿವುಡ್ ಬಾದ್ಶಾ ಶಾರುಖ್ ಖಾನ್, ಸಲ್ಮಾನ್ ಖಾನ್, ಅಮಿತಾಭ್ ಬಚ್ಚನ್ ಅವರಂತಹ ಸೂಪರ್ಸ್ಟಾರ್ಗಳು ಕುಳಿತ ಚೇರ್ನಲ್ಲಿ ಕನ್ನಡದ ಯಶ್ ಗಂಭೀರವಾಗಿ ಕುಳಿತು ಉತ್ತರ ನೀಡಿದ್ದಾರೆ.
ರಜತ್ ಶರ್ಮಾ ಅವರ ತೀಕ್ಷ್ಣ ಪ್ರಶ್ನೆಗಳಿಗೆ ಉತ್ತರಿಸುವುದು ಅಷ್ಟು ಸುಲಭವಲ್ಲ. ಆದರೆ ಯಶ್ ಇಲ್ಲಿ ಅತ್ಯಂತ ನಯವಾಗಿ ತಮ್ಮ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ ಎನ್ನುವ ನಿರೀಕ್ಷೆ ಇದೆ. ಕನ್ನಡಿಗರು ‘ರಾಕಿ ಭಾಯ್’ ಹೆಜ್ಜೆಯನ್ನು ಸಂಭ್ರಮಿಸುತ್ತಿದ್ದಾರೆ!
ರಜತ್ ಶರ್ಮಾ, ಯಶ್ ಜೊತೆಗಿನ ಹಾಟ್ ಸೀಟ್ ಫೋಟೋ ಶೇರ್ ಮಾಡಿ ಈ ವ್ಯಕ್ತಿ ಯಾರು? ಒಂದು ಕಾಲದಲ್ಲಿ ದಿನಕ್ಕೆ ಎರಡು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದ ಈತ, ಈಗ ಕೋಟ್ಯಂತರ ರೂಪಾಯಿ ಸಂಪಾದಿಸುತ್ತಿದ್ದಾರೆ. ಕಟಕಟೆಯಲ್ಲಿ ಕುಳಿತಿರುವವರು ಯಾರು? ಆತ ತೆರೆ ಮೇಲೆ ಬರುವುದಿಲ್ಲ. ಬದಲಿಗೆ ಪರದೆಯನ್ನೇ ಹರಿದು ಹಾಕುತ್ತಾರೆ. ಯಾರೆಂದು ಗುರುತಿಸುತ್ತೀರಾ?’ ಎಂದು ಬರೆದುಕೊಂಡಿದ್ದಾರೆ.
—–





Be the first to comment