ದರ್ಶನ್

ದರ್ಶನ್ ಬಗ್ಗೆ ಸ್ಪೋಟಕ ಸತ್ಯ ಬಿಚ್ಚಿಟ್ಟ ಪ್ರದೋಶ್

ರೇಣುಕಾಸ್ವಾಮಿ ಸಾವನ್ನಪ್ಪಿರುವ  ಸುದ್ದಿ ಕೇಳಿದ ದರ್ಶನ್ ಆಘಾತಕ್ಕೊಳಗಾಗಿ ಶೂಟ್ ಮಾಡಿಕೊಳ್ಳುವುದಾಗಿ ಹೇಳಿದ್ದರು ಎಂದು ಮಾಫಿಸಾಕ್ಷಿಯಾಗಿರುವ ಪ್ರದೂಷ್ ತಿಳಿಸಿದ್ದಾರೆ.

ಬೆಂಗಳೂರಿನ ಸೆಷನ್ಸ್ ಕೋರ್ಟ್‌ನಲ್ಲಿ ನ್ಯಾಯಾಧೀಶರಾದ ಸುಜಾತಾ ಸಾಂಬ್ರಾಣಿ ಅವರ ಮುಂದೆ ಮಾಫಿಸಾಕ್ಷಿ ಹೇಳಿಕೆ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ. ಕೊಲೆಯ ಬಳಿಕ ನಡೆದ ಬೆಳವಣಿಗೆಗಳ ಕುರಿತು ಹಲವು ಮಹತ್ವದ ವಿಚಾರಗಳನ್ನು ಪ್ರದೂಷ್ ನ್ಯಾಯಾಲಯದ ಮುಂದೆ ತಿಳಿಸಿದ್ದಾರೆ.

ಶೆಡ್ ಮಾಲೀಕ ವಿನಯ್ ಸ್ಥಳಕ್ಕೆ ಬಂದು ಶೆಡ್‌ಗೆ ಕೆಟ್ಟ ಹೆಸರು ಬರುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿ  ರಾಘವೇಂದ್ರ, ಅನುಕುಮಾರ್, ಜಗದೀಶ್ ಮತ್ತು ರವಿ ಅವರಿಗೆ ಮೃತದೇಹವನ್ನು ಚಿತ್ರದುರ್ಗಕ್ಕೆ ತೆಗೆದುಕೊಂಡು ಹೋಗುವಂತೆ ಸೂಚಿಸಿದ್ದರು .ಆದರೆ ರವಿ ಇದಕ್ಕೆ ನಿರಾಕರಿಸಿದ್ದಾಗಿ ಪ್ರದೂಷ್ ಹೇಳಿದ್ದಾರೆ.

ಮುಂದೇನು ಮಾಡಬೇಕು ಎಂಬುದು ತಿಳಿಯದೆ ಪರಿಚಿತ ಸಬ್‌ಇನ್ಸ್‌ಪೆಕ್ಟರ್ ಬಳಿ ಸಲಹೆ ಕೇಳಿದ್ದಾಗಿ ಹೇಳಿದ್ದಾರೆ. ಇದಕ್ಕೆ ಪಿಎಸ್‌ಐ ಪ್ರಕರಣ ಗಂಭೀರ ಅಪರಾಧವಾಗಿರುವುದರಿಂದ ಸಂಬಂಧಪಟ್ಟ ಪೊಲೀಸ್ ಠಾಣೆಗೆ ತೆರಳಿ ಶರಣಾಗುವಂತೆ ಸೂಚಿಸಿದ್ದರು ಎಂದು ಹೇಳಿದ್ದಾರೆ.

ಪಿಎಸ್‌ಐಗೆ ಕರೆ ಮಾಡಿ ಹಣಕಾಸಿನ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ವ್ಯಕ್ತಿಯೊಬ್ಬನನ್ನು ಹೊಡೆದು ಸಾಯಿಸಲಾಗಿದೆ ಎಂಬ ರೀತಿಯಲ್ಲಿ ಮಾಹಿತಿ ನೀಡಿದ್ದಾಗಿ ಪ್ರದೂಷ್ ಹೇಳಿದ್ದಾರೆ. ಮೂರ್ನಾಲ್ಕು ಮಂದಿ ಶರಣಾದರೆ ಕೆಲವು ತಿಂಗಳಲ್ಲಿ ಜಾಮೀನು ಸಿಗಬಹುದು ಎಂದು ತಿಳಿಸಿ ಶರಣಾಗತಿಗೆ ಸಿದ್ಧತೆ ನಡೆಸಿದ್ದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಆರೋಪಿಗಳ ಕುಟುಂಬದ ಖರ್ಚು, ಜೈಲು ಖರ್ಚು ಹಾಗೂ ಜಾಮೀನು ಪ್ರಕ್ರಿಯೆ ಸೇರಿದಂತೆ ವಿವಿಧ ವೆಚ್ಚಗಳಿಗೆ ಕನಿಷ್ಠ 30 ಲಕ್ಷ ರೂಪಾಯಿ ಅಗತ್ಯವಿದೆ ಎಂದು ದರ್ಶನ್ ಬಳಿ ತಿಳಿಸಿದ್ದಾಗಿ ಪ್ರದೂಷ್ ನ್ಯಾಯಾಲಯಕ್ಕೆ ಹೇಳಿದ್ದಾರೆ.

ಮುಂದಿನ ವಿಚಾರಣೆಯಲ್ಲಿ ಕೊಲೆಯ ಬಳಿಕ ನಡೆದ   ಬೆಳವಣಿಗೆಗಳ ಕುರಿತು ಪ್ರದೂಷ್ ಏನೆಲ್ಲಾ ಹೇಳಿಕೆ ನೀಡಲಿದ್ದಾರೆ ಎಂಬ ಕುತೂಹಲ ಮೂಡಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!