ಆಗಸ್ಟ್ 16ರಂದು ಬಿಗ್ ಬಾಸ್ ಅಗ್ನಿ ಪರೀಕ್ಷೆ ಗೆದ್ದವರ ಹೆಸರು ಬಹಿರಂಗ

ಬಿಗ್ ಬಾಸ್ ಕನ್ನಡ ಸೀಸನ್ 13ರ ಅಗ್ನಿ ಪರೀಕ್ಷೆಯಲ್ಲಿ ಯಶಸ್ವಿಯಾದ ಸ್ಪರ್ಧಿಗಳ ಹೆಸರನ್ನು ಆಗಸ್ಟ್ 16ರಂದು ರಾತ್ರಿ 9 ಗಂಟೆಗೆ ಬಹಿರಂಗಪಡಿಸಲಾಗುವುದು ಎಂದು ಕಲರ್ಸ್ ಕನ್ನಡ ವಾಹಿನಿ  ಘೋಷಿಸಿದೆ.

ಇತ್ತೀಚೆಗೆ ಬಿಡುಗಡೆಗೊಂಡಿರುವ ಪ್ರೊಮೋದಲ್ಲಿ, ‘ಬಂದಿರುವ ಅರ್ಜಿಗಳ ಪೈಕಿ ಕೆಲವರನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಗಿದೆ. ಈ ಅಭ್ಯರ್ಥಿಗಳಲ್ಲಿ ಅಗ್ನಿ ಪರೀಕ್ಷೆಯಲ್ಲಿ ಗೆದ್ದು ಬಿಗ್ ಬಾಸ್ ಮನೆ ಪ್ರವೇಶಿಸುವವರು ಯಾರು ಎಂಬುದನ್ನು ಆಗಸ್ಟ್ 16ರ ರಾತ್ರಿ 9 ಗಂಟೆಗೆ ಅಧಿಕೃತವಾಗಿ ಪ್ರಕಟಿಸಲಾಗುವುದು’ ಎಂದು ವಾಹಿನಿ ಹೇಳಿದೆ.

“ನಿಮ್ಮ ಕನಸುಗಳು ವಿಡಿಯೋ ಮೂಲಕ ನಮ್ಮನ್ನು ತಲುಪಿವೆ. ಈಗ ಆ ಕನಸುಗಳಿಗೆ ವೇದಿಕೆ ಸಜ್ಜಾಗುತ್ತಿದೆ. ಅಗ್ನಿ ಪರೀಕ್ಷೆ ಗೆದ್ದು ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆಯುವವರು ಯಾರು ಎಂಬುದನ್ನು ತಿಳಿಯಲು ಆಗಸ್ಟ್ 16ರವರೆಗೆ ಕಾಯಿರಿ” ಎಂಬ ಸಂದೇಶವನ್ನು ಪ್ರೊಮೋದಲ್ಲಿ ನೀಡಲಾಗಿದೆ.

ಈ ಬಾರಿ ಕನ್ನಡ ಸೇರಿದಂತೆ ಕೆಲವು ಭಾಷೆಗಳ ಬಿಗ್ ಬಾಸ್ ಆವೃತ್ತಿಗಳಲ್ಲಿ ಮೊದಲ ಬಾರಿಗೆ ಜನಸಾಮಾನ್ಯರಿಗೂ ಅವಕಾಶ ನೀಡಲಾಗಿದೆ. ಇದಕ್ಕಾಗಿ ಆಸಕ್ತರು ಮೂರು ನಿಮಿಷಗಳ ವಿಡಿಯೋ ಸಿದ್ಧಪಡಿಸಿ ತಾವು ಯಾಕೆ ಬಿಗ್ ಬಾಸ್ ಮನೆಗೆ ಆಯ್ಕೆಯಾಗಬೇಕು? ತಮ್ಮ ವ್ಯಕ್ತಿತ್ವ ಹಾಗೂ ವಿಶೇಷತೆಗಳೇನು ಎಂಬುದನ್ನು ವಿವರಿಸಿ ಕಳುಹಿಸುವಂತೆ ವಾಹಿನಿ ಸೂಚಿಸಿತ್ತು. ಅದರಂತೆ ಸಾವಿರಾರು ಮಂದಿ ತಮ್ಮ ಕನಸನ್ನು ನನಸಾಗಿಸಿಕೊಳ್ಳುವ ಆಶಯದಿಂದ ಅರ್ಜಿ ಸಲ್ಲಿಸಿದ್ದಾರೆ.

ಈ ಬಾರಿಯ ಸೆಲೆಬ್ರಿಟಿ ಸ್ಪರ್ಧಿಗಳ ಪಟ್ಟಿಯನ್ನು  ವಾಹಿನಿ   ಗೌಪ್ಯವಾಗಿಟ್ಟಿದೆ. ಈಗಾಗಲೇ ಹಲವು ಗಣ್ಯರಿಗೆ ಆಹ್ವಾನ ನೀಡಲಾಗಿದ್ದು, ಅಂತಿಮ ಸಿದ್ಧತೆಗಳು ನಡೆಯುತ್ತಿವೆ ಎನ್ನಲಾಗುತ್ತಿದೆ.

——

Be the first to comment

Leave a Reply

Your email address will not be published. Required fields are marked *

Translate »
error: Content is protected !!