ನಾನು ಮೊದಲು ಸಾಧಾರಣ ಹಿಂದೂ ಆಗಿದ್ದೆ. ಈಗ ಜಾಗೃತ ಹಿಂದೂ ಆಗಿದ್ದೇನೆ. ಬಿಜೆಪಿ ಹಾಗೂ ಆರ್‌ಎಸ್‌ಎಸ್ ಸಿದ್ಧಾಂತವನ್ನು ಒಪ್ಪಿಕೊಂಡು ಸಂಘಿ ಆಗಲು ಬಯಸುತ್ತೇನೆ. ಬದಲಾಗಲು ನನಗೆ ಏಕೆ ಅವಕಾಶವಿಲ್ಲ?” ಎಂದು ಬಾಲಿವುಡ್ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಪ್ರಶ್ನಿಸಿದ್ದಾರೆ.
ಕಂಗನಾ ಅವರ ಹಲವು ವರ್ಷಗಳ ಹಿಂದಿನ ಪಾರ್ಟಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು,ಬೆನ್ನಲ್ಲೇ ಅವರು ನೀಡಿರುವ ಹೇಳಿಕೆ ಚರ್ಚೆಗೆ ಕಾರಣವಾಗಿದೆ. 2018ರ ಕಾನ್ ಚಲನಚಿತ್ರೋತ್ಸವದ ಆಫ್ಟರ್ ಪಾರ್ಟಿಯಲ್ಲಿ ಕಂಗನಾ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಹಂಚಿಕೊಂಡು ಹಲವರು ಅವರ ರಾಜಕೀಯ ಮತ್ತು ಧಾರ್ಮಿಕ ನಿಲುವುಗಳನ್ನು ಪ್ರಶ್ನಿಸಿ ಟ್ರೋಲ್ ಮಾಡಿದ್ದರು.
”ಸಮಾಜದಲ್ಲಿ ಹಿಂದೂ ಮಹಿಳೆಯರ ಬಗ್ಗೆ ಇಬ್ಬಂದಿ ನಿಲುವು ಇದೆ. ನಾನು ಹಿಂದೆ ಪಾರ್ಟಿ ಮಾಡಿದ್ದೇನೆ. ಆದರೆ ಈಗ ಶಿಸ್ತುಬದ್ಧ ಮತ್ತು ಧಾರ್ಮಿಕ ಜೀವನವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಅದಕ್ಕೆ ನನ್ನನ್ನು ಟೀಕಿಸುವುದು ಏಕೆ?” ಎಂದು ಕಂಗನಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈಗ ಕಂಗನಾ ಸರಣಿ ವಿವಾದಗಳಿಂದ ಸುದ್ದಿಯಲ್ಲಿದ್ದಾರೆ. ಸೋನಾಕ್ಷಿ ಸಿನ್ಹಾ ಹೆಸರನ್ನು ಉಲ್ಲೇಖಿಸದೇ ಅವರ ಉಡುಗೆ ಮತ್ತು ನಡವಳಿಕೆಯನ್ನು ಟೀಕಿಸಿದ್ದರು. ಕಂಗನಾ ಪ್ರತಿಭಟನಾನಿರತ ಯುವಜನರನ್ನು ‘ಜನರೇಷನ್ ಗಟ್ಟರ್’ ಎಂದು ಕರೆದಿದ್ದ ಹೇಳಿಕೆ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.





Be the first to comment