‘ರಾಮಾಯಣ’ ಟ್ರೇಲರ್‌ಗೆ ಪಾಕ್‌ನಲ್ಲಿ ಮೆಚ್ಚುಗೆ

ರಾವಣನಾಗಿ ಯಶ್ ಕಾಣಿಸಿಕೊಂಡಿರುವ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದ ಟ್ರೇಲರ್ ಗೆ ಪಾಕಿಸ್ತಾನದಲ್ಲಿ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿದೆ.

ಜುಲೈ 30ರಂದು ಬಿಡುಗಡೆಯಾದ ಟ್ರೇಲರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದೆ. ರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಕಾಣಿಸಿಕೊಂಡಿರುವ ಟ್ರೇಲರ್‌ಗೆ ಪಾಕಿಸ್ತಾನದ ಯೂಟ್ಯೂಬರ್‌ಗಳು ಮತ್ತು ಕಂಟೆಂಟ್ ಕ್ರಿಯೇಟರ್‌ಗಳು ಮೆಚ್ಚುಗೆಯ ಸುರಿಮಳೆಗೈದಿದ್ದಾರೆ.

“ಒಬ್ಬ ಪಾಕಿಸ್ತಾನಿ ಪ್ರೇಕ್ಷಕನಾಗಿ ಹೇಳುವುದಾದರೆ, ‘ರಾಮಾಯಣ’ ಟ್ರೇಲರ್ ಅದ್ಭುತವಾಗಿದೆ.  ಇದು ಹಾಲಿವುಡ್ ಮಟ್ಟದ ಸಿನಿಮಾ ಎನ್ನಿಸುವಂತಿದೆ. ಭಾರತೀಯ ಸಿನಿಮಾ ಮತ್ತೊಂದು ಹಂತಕ್ಕೆ ತಲುಪಿದೆ. ಯಶ್ ಮತ್ತು ರಣಬೀರ್ ನಡುವಿನ ಮುಖಾಮುಖಿಯನ್ನು ದೊಡ್ಡ ಪರದೆಯಲ್ಲಿ ನೋಡಲು ಕಾತುರನಾಗಿದ್ದೇನೆ” ಎಂದು ಪಾಕಿಸ್ತಾನದ ಜನಪ್ರಿಯ ಯೂಟ್ಯೂಬರ್ ಮಾವಿಯಾ ಉಮರ್ ಫಾರೂಕಿ  ಅವರು ಹೇಳಿದ್ದಾರೆ.

“ರಾವಣನ ಪಾತ್ರದಲ್ಲಿ ಯಶ್ ಅವರ ಲುಕ್ ಕ್ರೇಜಿಯಾಗಿದೆ. ಗ್ರಾಫಿಕ್ಸ್, ಆ್ಯಕ್ಷನ್ ಹಾಗೂ ದೃಶ್ಯ ವಿನ್ಯಾಸ ಅದ್ಭುತವಾಗಿದೆ” ಎಂದು ಪಾಕಿಸ್ತಾನಿ ಯೂಟ್ಯೂಬರ್ ಹಸ್ನಾತ್ ಖಾನ್  ಮೆಚ್ಚುಗೆ ಸೂಚಿಸಿದ್ದಾರೆ.

ಟ್ರೇಲರ್‌ನಲ್ಲಿ  ಶ್ರೀರಾಮ ವನವಾಸಕ್ಕೆ ತೆರಳುವುದು,  ರಾಮ-ರಾವಣ ಯುದ್ಧದ ಭವ್ಯ ದೃಶ್ಯಗಳು ಪ್ರೇಕ್ಷಕರ ಗಮನ ಸೆಳೆದಿವೆ. ಹನುಮಂತನ ಪಾತ್ರವನ್ನು ಸಂಪೂರ್ಣವಾಗಿ ಗೌಪ್ಯವಾಗಿಟ್ಟಿರುವುದು ಚಿತ್ರದ ಬಗ್ಗೆ  ಕುತೂಹಲ ಹೆಚ್ಚಿಸಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!