ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್‌ಬಾಸ್ ಕನ್ನಡ ಸೀಸನ್ 13’ ಕಾರ್ಯಕ್ರಮದ ಮೊದಲ ಪ್ರೋಮೊ ಬಿಡುಗಡೆಯಾಗಿದೆ.
ಕಲರ್ಸ್ ಕನ್ನಡ ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಭಾನುವಾರ (ಆಗಸ್ಟ್ 2) ಮೊದಲ ಪ್ರೋಮೊ ಬಿಡುಗಡೆ ಮಾಡಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಪ್ರಸಾರ ಆರಂಭವಾಗಲಿರುವ ಈ ಬಹುನಿರೀಕ್ಷಿತ ಕಾರ್ಯಕ್ರಮದ ಪ್ರೋಮೊದಲ್ಲಿ ಕಪ್ಪು ಬಣ್ಣದ ಔಟ್‌ಫಿಟ್ ಹಾಗೂ ಕೂಲಿಂಗ್ ಗ್ಲಾಸ್‌ನಲ್ಲಿ ಕಂಗೊಳಿಸಿರುವ ಕಿಚ್ಚ ಸುದೀಪ್ ನೂರಾರು ಅಭಿಮಾನಿಗಳ ನಡುವೆ ಎಂಟ್ರಿ ನೀಡುತ್ತಾರೆ.
ಪ್ರೋಮೊದಲ್ಲಿ ಸುದೀಪ್, “ಕರ್ನಾಟಕದ ಜನ ಯಾರಿಗೂ ಕಾಯುವುದು ಇತಿಹಾಸದಲ್ಲೇ ಇಲ್ಲ. ಆದರೆ ವರ್ಷಕ್ಕೊಮ್ಮೆ ಮಾತ್ರ ಕಾಯುತ್ತಾರೆ. “ಒಂದು ಮನೆ… ಒಂದು ಅವಕಾಶ… ಕೋಟಿ ಕನಸುಗಳು… ಮತ್ತೆ ಶುರು ಮಾಡೋಣವಾ?” ಎಂಬ ಡೈಲಾಗ್ ಮೂಲಕ ಬಿಗ್‌ಬಾಸ್ ಹೊಸ ಸೀಸನ್‌ಗೆ ಅ ಚಾಲನೆ ನೀಡುವ ಸುಳಿವು ನೀಡಿದ್ದಾರೆ.
ಪ್ರೋಮೊ ಬಿಡುಗಡೆಯಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಈ ಬಾರಿ ಬಿಗ್‌ಬಾಸ್ ಮನೆಗೆ ಯಾರು ಸ್ಪರ್ಧಿಗಳಾಗಿ ಪ್ರವೇಶಿಸಲಿದ್ದಾರೆ ಎಂಬ ಚರ್ಚೆ ಜೋರಾಗಿದೆ. ಕಲಾವಿದರು, ಕ್ರೀಡಾಪಟುಗಳು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳು, ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆ ಪಡೆದವರ ಹೆಸರುಗಳು ಹರಿದಾಡುತ್ತಿವೆ. ಆದರೆ ಸ್ಪರ್ಧಿಗಳ ಅಧಿಕೃತ ಪಟ್ಟಿಯನ್ನು ವಾಹಿನಿ ಇನ್ನೂ ಬಹಿರಂಗಪಡಿಸಿಲ್ಲ.
ಈ ಬಾರಿಯ ಸೀಸನ್‌ನಲ್ಲಿ ಸಾಮಾನ್ಯ ಜನರಿಗೂ ಬಿಗ್‌ಬಾಸ್ ಮನೆ ಪ್ರವೇಶಿಸುವ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಈ ಸೀಸನ್ ಇನ್ನಷ್ಟು ಕುತೂಹಲ ಮೂಡಿಸಿದೆ.
—-





Be the first to comment