ಸೆಪ್ಟಂಬರ್‍ನಲ್ಲಿ ‘ಯಾವಾಗಲೂ ನಿನ್ನೊಂದಿಗೆ’ ತೆರೆಗೆ

ಡೈರೆಕ್ಟರ್ ಡ್ರೀಂ ಕ್ರಿಯೇಷನ್ಸ್ ಲಾಂಛನದಲ್ಲಿ ಗಿರೀಶ್ ಜಿ ರಾಜ್ ನಿರ್ಮಿಸಿರುವ ‘ಯಾವಾಗಲೂ ನಿನ್ನೊಂದಿಗೆ’ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂದಳಿ ಯು/ಎ ಅರ್ಹತಾಪತ್ರವನ್ನು ನೀಡಿದೆ. ಚಿತ್ರ ಸೆಪ್ಟಂಬರ್‍ನಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಬೆಂಗಳೂರು, ಮೈಸೂರು, ಹಾಸನ ಮತ್ತು ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ನಡೆದಿದೆ.
ರೂಪೇಶ್ ಜಿ ರಾಜ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಸತೀಶ್ ಬಾಬು ಅವರ ಸಂಗೀತ ನಿರ್ದೇಶನವಿದೆ. ರೇಣುಕುಮಾರ್ ಛಾಯಾಗ್ರಹಣ, ಲಿಂಗರಾಜ್ ಸಂಕಲನ, ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಹಾಗೂ ರಾಜು ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರದ ನಾಯಕನಾಗಿ ರೂಪೇಶ್ ಜಿ ರಾಜ್ ಅಭಿನಯಿಸಿದ್ದಾರೆ. ಅರ್ಚನ ಈ ಚಿತ್ರದ ನಾಯಕಿ. ವಿ.ಮನೋಹರ್, ಹರೀಶ್ ರಾಯ್, ಟೆನ್ನಿಸ್ ಕೃಷ್ಣ, ಕುರಿ ರಂಗ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

This Article Has 2 Comments
  1. Pingback: Digital transformation companies

  2. Pingback: Klamath Falls Tow Truck

Leave a Reply

Your email address will not be published. Required fields are marked *

Translate »
error: Content is protected !!