ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ ‘ಜನ ನಾಯಗನ್’ ಸಿನಿಮಾ 100 ಕೋಟಿ ಗಳಿಕೆಯ ದಾಖಲೆ ಮುಂದುವರಿಸಲು ವಿಫಲವಾಗಿದೆ.
ಸಿನಿಮಾ ತಮಿಳು ಮಾರುಕಟ್ಟೆಯಲ್ಲಿ ಉತ್ತಮ ಆರಂಭ ಪಡೆದರೂ, ತೆಲುಗು ಮತ್ತು ಹಿಂದಿ ಪ್ರೇಕ್ಷಕರಿಂದ ನಿರೀಕ್ಷಿತ ಬೆಂಬಲ ಸಿಗದ ಕಾರಣ ಆರಂಭಿಕ ಗಳಿಕೆಯಲ್ಲೇ ಹಿನ್ನಡೆ ಕಂಡಿದೆ. ಮೊದಲ ದಿನವೇ 100 ಕೋಟಿ ರೂಪಾಯಿ ಕ್ಲಬ್ ಸೇರುವ ನಿರೀಕ್ಷೆಯಲ್ಲಿದ್ದ ಚಿತ್ರ, ಎಲ್ಲಾ ಭಾಷೆಗಳ ಒಟ್ಟು ಕಲೆಕ್ಷನ್‌ನಲ್ಲಿ ಸುಮಾರು 80 ಕೋಟಿ ರೂಪಾಯಿ ಗಳಿಕೆಗೆ ಸೀಮಿತವಾಗಿದೆ.
ದ ವಿಜಯ್ ಅವರ ಹಿಂದಿನ ‘ಲಿಯೋ’ ಹಾಗೂ ‘ಗೋಟ್’ ಚಿತ್ರಗಳು ನಿರ್ಮಿಸಿದ್ದ ಮೊದಲ ದಿನದ 100 ಕೋಟಿ ಗಳಿಕೆಯ ದಾಖಲೆ ಮುಂದುವರಿಸಲು ‘ಜನ ನಾಯಗನ್’ ವಿಫಲವಾಗಿದೆ. ಸಿನಿಮಾ ತೆಲುಗು ಸೂಪರ್‌ಹಿಟ್ ‘ಭಗವಂತ್ ಕೇಸರಿ’ ಚಿತ್ರದ ರಿಮೇಕ್ ಎಂಬ ಮಾಹಿತಿ ಬಹಿರಂಗವಾದ ಬಳಿಕ ಚಿತ್ರದ ಮೇಲಿನ ಕುತೂಹಲ ಕುಗ್ಗಿತ್ತು. ಕಥೆಯಲ್ಲಿ ದೊಡ್ಡ ಮಟ್ಟದ ಬದಲಾವಣೆ ಮಾಡಲಾಗಿದೆ ಎಂದು ನಿರ್ದೇಶಕ ಎಚ್. ವಿನೋದ್ ಹೇಳಿಕೊಂಡರೂ ಆ ಬದಲಾವಣೆಗಳೇ ಚಿತ್ರದ ದುರ್ಬಲ ಅಂಶಗಳಾಗಿ ಪರಿಣಮಿಸಿವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿದೆ.
ದ್ವಿತೀಯಾರ್ಧದಲ್ಲಿ ಸೇರಿಸಲಾದ ರಾಜಕೀಯ ಅಂಶಗಳು ಚಿತ್ರದ ವೇಗಕ್ಕೆ ಹೊಡೆತ ನೀಡಿವೆ. ಇದರ ಜೊತೆಗೆ ಬಿಡುಗಡೆಯ ದಿನವೇ ಸಿನಿಮಾ ಆನ್‌ಲೈನ್‌ನಲ್ಲಿ ಲೀಕ್ ಆಗಿ ಪೈರಸಿ ತಾಣಗಳಲ್ಲಿ ಹರಿದಾಡಿರುವುದು ಚಿತ್ರಮಂದಿರಗಳ ಕಲೆಕ್ಷನ್ ಮೇಲೂ ಪರಿಣಾಮ ಬೀರಿದೆ.
—-





Be the first to comment