ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ಪದ್ಮ ಪ್ರಶಸ್ತಿ ಅಥವಾ ಜ್ಞಾನಪೀಠ ಪ್ರಶಸ್ತಿ ನೀಡಬೇಕು ಎಂಬ ಅಭಿಯಾನ ನಿಲ್ಲಿಸುವಂತೆ ಖುದ್ದು ಹಂಸಲೇಖ ಅವರೇ ಮನವಿ ಮಾಡಿದ್ದಾರೆ.
ನೆನಪಿರಲಿ ಪ್ರೇಮ್ ಆರಂಭಿಸಿದ್ದ ಅಭಿಯಾನಕ್ಕೆ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯಿಸಿರುವ ಹಂಸಲೇಖ, ಪ್ರಶಸ್ತಿಗಿಂತ ಕನ್ನಡದ ಹಕ್ಕಿನ ಹೋರಾಟವೇ ಹೆಚ್ಚು ಮುಖ್ಯ ಎಂದು ಹೇಳಿದ್ದಾರೆ.
“ಕನ್ನಡದಾಣೆ, ಇದಕ್ಕೆ ನನ್ನ ಒಪ್ಪಿಗೆ ಇಲ್ಲ. ಇದು ಅನಗತ್ಯವಾದ ಅಭಿಮಾನದ ದುಡುಕು ಮತ್ತು ಪ್ರೀತಿಯ ತೊಂದರೆ. ಸೀನ್ಗೂ, ಟ್ಯೂನ್ಗೂ, ಲಿರಿಕ್ಸ್ಗೂ ಹೊಂದಾಣಿಕೆಯೇ ಇಲ್ಲ. ಫ್ಲಾಪ್ ಸಾಂಗಿದು… ದಯವಿಟ್ಟು ನಿಲ್ಲಿಸಿ. ನೆನಪಿರಲಿ ಪ್ರೀತಿಯ ಪ್ರೇಮ್” ಎಂದು ಹಂಸಲೇಖ ಅಭಿಪ್ರಾಯಪಟ್ಟಿದ್ದಾರೆ.
”ಕನ್ನಡ ನಮ್ಮ ಹಕ್ಕಿನ ಭಾಷೆ. ಈ ಸತ್ಯವನ್ನು ಪ್ರತಿದಿನವೂ ಸಾಬೀತುಪಡಿಸಬೇಕಾದ ಸಮಯದಲ್ಲಿದ್ದೇವೆ. ಅದಕ್ಕೆ ಬೇಕಾಗಿರುವುದು ಅಭಿಮಾನದ ಅಭಿಯಾನಗಳು” ಎಂದು ಸ್ಪಷ್ಟಪಡಿಸಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಸಾವಿರಾರು ಗೀತೆಗಳನ್ನು ನೀಡಿರುವ ಹಂಸಲೇಖ, ತೆಲುಗು, ತಮಿಳು ಹಾಗೂ ಹಿಂದಿ ಚಿತ್ರಗಳಿಗೂ ಸಂಗೀತ ನೀಡಿದ್ದಾರೆ. ಅವರ ಸಾಧನೆಯನ್ನು ಗಮನಿಸಿ ಪದ್ಮ ಪ್ರಶಸ್ತಿ ಅಥವಾ ಜ್ಞಾನಪೀಠ ಪ್ರಶಸ್ತಿ ನೀಡಬೇಕೆಂದು ನೆನಪಿರಲಿ ಪ್ರೇಮ್ ಇತ್ತೀಚೆಗೆ ಅಭಿಯಾನ ಆರಂಭಿಸಿದ್ದರು.
—–





Be the first to comment