ಜುಲೈ 24ರಿಂದ ಅಪ್ಪು ಕಪ್

‘ಅಪ್ಪು ಕಪ್’ ಶಟಲ್ ಬ್ಯಾಡ್ಮಿಂಟನ್ ಟೂರ್ನಿಯ ನಾಲ್ಕನೇ ಆವೃತ್ತಿ ಜುಲೈ 24ರಿಂದ 26ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ.

ಈ ಬಾರಿಯ ಟೂರ್ನಿಯಲ್ಲಿ ಭಾಗವಹಿಸುತ್ತಿರುವ 10 ತಂಡಗಳ ಮಾಲೀಕರು, ನಾಯಕರು, ರಾಯಭಾರಿಗಳು, ಪುರುಷ ಮತ್ತು ಮಹಿಳಾ ಐಕಾನ್ ಆಟಗಾರರು ಟೂರ್ನಿಯ ಉದ್ಘಾಟನೆ ಹಾಗೂ ಟೀಮ್ ಆಕ್ಷನ್ ಸಮಾರಂಭದಲ್ಲಿ ಭಾಗವಹಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರರಾಗಿದ್ದ ಕೆ.ವಿ. ಪ್ರಭಾಕರ್, ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಟೂರ್ನಿಗೆ ಶುಭ ಕೋರಿದರು.

ಆಯೋಜಕ ಚೇತನ್ ಸೂರ್ಯ ಮಾತನಾಡಿ,ಜುಲೈ 24ರಿಂದ 26ರವರೆಗೆ ನಡೆಯುವ ಪಂದ್ಯಗಳ ನೇರ ಪ್ರಸಾರವೂ ಇರಲಿದೆ. ಫೈನಲ್ ಪಂದ್ಯ ನಡೆಯುವ ಸ್ಥಳವನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ತಿಳಿಸಿದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!