100 ಕೋಟಿ ಕ್ಲಬ್‌ಗೆ ‘ಮಾ ಇಂಟಿ ಬಂಗಾರಂ’

‘ಮಾ ಇಂಟಿ ಬಂಗಾರಂ’ ಚಿತ್ರದ ಮೂಲಕ ಸಮಂತಾ ಋತ್ ಪ್ರಭು ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ.

ಮಹಿಳಾ ಪ್ರಧಾನ ಕಥಾಹಂದರದ ‘ಮಾ ಇಂಟಿ ಬಂಗಾರಂ’ ಸಿನಿಮಾ ಶೀಘ್ರದಲ್ಲೇ 100 ಕೋಟಿ ಕ್ಲಬ್ ಸೇರುವ ನಿರೀಕ್ಷೆಯಿದೆ.  ಈ ಸಿನಿಮಾ ವಿಶ್ವದಾದ್ಯಂತ ಈಗಾಗಲೇ 98 ಕೋಟಿಗೂ ಅಧಿಕ ಕಲೆಕ್ಷನ್ ದಾಖಲಿಸಿದೆ.

ಈ ಹಿಂದೆ ತೆಲುಗು ಚಿತ್ರರಂಗದಲ್ಲಿ ‘ರುದ್ರಮ್ಮದೇವಿ’ (86 ಕೋಟಿ), ‘ಅರುಂಧತಿ’ (75 ಕೋಟಿ) ಹಾಗೂ ‘ಮಹಾನಟಿ’ (  90 ಕೋಟಿ) ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಅತಿ ಹೆಚ್ಚು ಗಳಿಕೆ ದಾಖಲಿಸಿದ್ದವು. ಆ ದಾಖಲೆಗಳನ್ನು ‘ಮಾ ಇಂಟಿ ಬಂಗಾರಂ’ ಹಿಂದಿಕ್ಕಿದೆ.

ದಕ್ಷಿಣ ಭಾರತ ದಲ್ಲಿ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರದ ದಾಖಲೆ  ಮಲಯಾಳಂ ಸಿನಿಮಾ ‘ಲೋಕಃ: ಚಾಪ್ಟರ್ 1’ ಹೆಸರಿನಲ್ಲಿದ್ದು, ಆ ಚಿತ್ರ  300 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ‘ಮಾ ಇಂಟಿ ಬಂಗಾರಂ’ 100 ಕೋಟಿ ಕ್ಲಬ್ ಸೇರುವ ಮೂಲಕ ಈ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆಯಲು ಸಜ್ಜಾಗಿದೆ.

ನಂದಿನಿ ರೆಡ್ಡಿ ನಿರ್ದೇಶನದ ‘ಮಾ ಇಂಟಿ ಬಂಗಾರಂ’ ಚಿತ್ರವನ್ನು ಸಮಂತಾ ಹಾಗೂ ಅವರ ಪತಿ ರಾಜ್ ನಿಧಿಮೋರು ನಿರ್ಮಿಸಿದ್ದಾರೆ. ಚಿತ್ರದಲ್ಲಿ ಕನ್ನಡ ನಟ ದಿಗಂತ್ ಮಂಚಾಲೆ,  ಗುಲ್ಷನ್ ದೇವಯ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ  ಯಶಸ್ಸಿನ ಬೆನ್ನಲ್ಲೇ ಎರಡನೇ ಭಾಗ ನಿರ್ಮಾಣವಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ.

——

Be the first to comment

Leave a Reply

Your email address will not be published. Required fields are marked *

Translate »
error: Content is protected !!