ಅಕ್ಟೋಬರ್ 15ರಂದು ‘ಜೈಲರ್ 2’ ಬಿಡುಗಡೆ

ಸೂಪರ್​ಸ್ಟಾರ್​ ರಜನಿಕಾಂತ್​ ಅವರ ಬಹುನಿರೀಕ್ಷಿತ ‘ಜೈಲರ್​ 2’ ಸಿನಿಮಾ ಅಕ್ಟೋಬರ್ 15 ರಂದು ಬಿಡುಗಡೆಯಾಗಲಿದೆ.

ನೆಲ್ಸನ್​ ದಿಲೀಪ್​ಕುಮಾರ್​ ನಿರ್ದೇಶನದ ಬಹುನಿರೀಕ್ಷಿತ ‘ಜೈಲರ್ 2’ ಚಿತ್ರದ ನಿರ್ಮಾಪಕರು ಆಕ್ಷನ್-ಪ್ಯಾಕ್ಡ್ ಪ್ರೋಮೋದೊಂದಿಗೆ ಚಿತ್ರದ ಬಿಡುಗಡೆ ದಿನಾಂಕವನ್ನು ಇಂದು ಅಧಿಕೃತವಾಗಿ ಘೋಷಿಸಿದ್ದಾರೆ. ಕಲಾನಿಧಿ ಮಾರನ್ ನಿರ್ಮಿಸಿರುವ ಈ ಹೈಬಜೆಟ್​ ಚಿತ್ರದಲ್ಲಿ ರಜನಿ ಅವರ ಜೊತೆಗೆ ಇತರ ಚಿತ್ರರಂಗದ ದಿಗ್ಗಜ ನಟರು ಕೂಡ ನಟಿಸಿದ್ದಾರೆ.

‘ಜೈಲರ್​ 2’ ಟೀಸರ್​ ತುಣುಕಿನಲ್ಲಿ ರಜನಿ ಅವರದ್ದು ಹೊಸ ಲುಕ್​ ಎನ್ನಿಸುವಂತೆ ಕಂಡುಬಂದಿದೆ. ಆದರೂ ಚಿತ್ರತಂಡ ಅಷ್ಟಾಗಿ ಯಾವುದನ್ನೂ ರಿವೀಲ್​ ಮಾಡಿಲ್ಲ. ಟೀಸರ್​ನಲ್ಲಿ ಬಿಜಿಎಂ ಸದ್ದು ಮಾಡಿದೆ. ಚಿತ್ರದಲ್ಲಿ ಯಾರೆಲ್ಲ ಕಲಾವಿದರು ನಟಿಸಿದ್ದಾರೋ ಅವರ ಪಾತ್ರ ಒಂದು ಸೆಕೆಂಡ್​ನಲ್ಲಿ ಪಾಸಿಂಗ್ ಶಾಟ್​ ಆಗಿ ತೋರಿಸಲಾಗಿದೆ.

ಚಿತ್ರಕ್ಕೆ ಸೂಪರ್​ಹಿಟ್​ ಮ್ಯೂಸಿಕಲ್​ ಕಂಪೋಸರ್​ ಅನಿರುದ್ಧ್​ ರವಿಚಂದ್ರನ್  ಸಂಗೀತ ನೀಡಿದ್ದಾರೆ. ರಜನಿಕಾಂತ್​, ಮಿರ್ನಾ ಮೆನನ್​, ಮೋಹನ್​ ಲಾಲ್​, ಹ್ಯಾಟ್ರಿಕ್​ ಹೀರೋ ಶಿವಕಾಜ್​ಕುಮಾರ್​, ಹೃತಿಕ್​ ರೋಷನ್​, ಮೋಹನ್​ ಲಾಲ್​, ರಮ್ಯ ಕೃಷ್ಣನ್​ ಸೇರಿದಂತೆ ದಿಗ್ಗಜ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು,  ಸಿನಿಪ್ರಿಯರಲ್ಲಿ ಭಾರಿ ಕುತೂಹಲ ಕೆರಳಿಸಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!