ಸುಮಾರು 15 ವರ್ಷಗಳ ನಂತರ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಅವರು ಮತ್ತೊಮ್ಮೆ ಆ್ಯಕ್ಷನ್ ಕಟ್ ಹೇಳಿರುವ ಚಿತ್ರ ಡೆಡ್ಲಿ ಕಿಲ್ಲರ್ ಈ ವಾರ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಕೀರ್ತಿ ಸಿಲ್ವರ್ ಸ್ಕ್ರೀನ್ ಹಾಗೂ ವೇದಿಕ್ ಕಾಸ್ಮಾಸ್ ಬ್ಯಾನರ್ ಅಡಿ ಪ್ರಶಾಂತ್ ಟಿ.ತಂಬ್ರಳ್ಳಿಮಠ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಆಕ್ಚನ್, ಸಸ್ಪೆನ್ಸ್, ಥ್ರಿಲ್ಲರ್ ಜತೆ ಹಾರರ್ ಹಿನ್ನೆಲೆ ಇರುವ ಈ ಚಿತ್ರದಲ್ಲಿ ಅಭಯ್‌ವೀರ್ ಹಾಗೂ ನಿವೀಕ್ಷಾ ನಾಯಕ, ನಾಯಕಿಯಾಗಿ ನಟಿಸಿದ್ದಾರೆ. ಥ್ರಿಲ್ಲರ್ ಮಂಜು ಮತ್ತೊಂದು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
ನಿರ್ಮಾಪಕ ಪ್ರಶಾಂತ್ ಟಿ.ತಂಬ್ರಳ್ಳಿಮಠ ಮಾತನಾಡುತ್ತ ನಾಯಕ ಅಭಯ್ ಅವರಿಂದಲೇ ಥ್ರಿಲ್ಲರ್ ಮಂಜು ಮಾಸ್ಟರ್ ಪರಿಚಯವಾಗಿ ಈ ಸಿನಿಮಾ ಆಯಿತು. ಚಿತ್ರದ ಟ್ರೈಲರ್ ನೋಡಿದ ಎಲ್ಲರಿಗೂ ಸಿನಿಮಾ ನೋಡುವ ಕುತೂಹಲ ಹುಟ್ಟುತ್ತದೆ. ಇದೇ ಶುಕ್ರವಾರ ನಮ್ಮ ಚಿತ್ರ ರಾಜ್ಯದ ಎಲ್ಲಾ ಕೇಂದ್ರಗಳಲ್ಲಿ ರಿಲೀಸಾಗುತ್ತಿದೆ ಎಂದರು. .ಚಿತ್ರದಲ್ಲಿ 6 ವಿಭಿನ್ನ ಆಕ್ಷನ್ ಸೀನ್ ಗಳಿವೆ. ನಾಯಕಿ ನಿರೀಕ್ಷಾ ಗೃಹಿಣಿಯ ಪಾತ್ರದಲ್ಲಿದ್ದು ಅವರ ಪಾತ್ರಕ್ಕೆ 2 ಶೇಡ್ಸ್ ಇದೆ.

ನಿರ್ದೇಶಕ ಥ್ರಿಲ್ಲರ್ ಮಂಜು ಹೇಳುವಂತೆ ಇಡೀ ಚಿತ್ರ ಫಾಸ್ಟ್ ಆಗಿ ಸಾಗುತ್ತದೆ. ಸಸ್ಪೆನ್ಸ್ ಥ್ರಿಲ್ಲರ್ ಜತೆ ಅದ್ಭುತವಾದ ನರೇಶನ್ ಈ ಚಿತ್ರದಲ್ಲಿದೆ. ಆರು ಜನ ಗ್ಯಾಂಗ್ ಸ್ಟರ್ಸ್ ಕಾಡಿನಲ್ಲಿ ತಪ್ಪಿಸಿಕೊಳ್ತಾರೆ, ಅವರನ್ನು ನಾಯಕ ಹೇಗೆ ಟ್ರ್ಯಾಪ್ ಮಾಡಿ ಹಿಡೀತಾರೆ ಅನ್ನೋದೇ ಈ ಚಿತ್ರದ ಒನ್ ಲೈನ್ ಕಥೆ ಎಂದು ಹೇಳಿದರು.
ಡೆಡ್ಲಿ ಕಿಲ್ಲರ್ ಚಿತ್ರದಲ್ಲಿ ಒಟ್ಟು 3 ಹಾಡುಗಳಿದ್ದು, ವಿನು ಮನಸು ಸಂಗೀತ ಸಂಯೋಜನೆ ಮಾಡಿದ್ದಾರೆ. ಅಲ್ಲದೆ ಮಲ್ಲಿಕಾರ್ಜುನ್ ಅವರ ಛಾಯಾಗ್ರಹಣ, ದೀಪು ಅವರ ಸಂಕಲನ ಈ ಚಿತ್ರಕ್ಕಿದೆ. ಚಿತ್ರದಲ್ಲಿ 6 ವಿಶಿಷ್ಠವಾದ ಸಾಹಸ ದೃಶ್ಯಗಳಿಗೆ, ನಿರ್ದೇಶಕ ಥ್ರಿಲ್ಲರ್ ಮಂಜು ಅವರೇ ಕಂಪೋಜ್ ಮಾಡಿದ್ದಾರೆ. ವೇದಿಕ್ ವೀರ್ ಪೋಸ್ಟ್ ಪ್ರೊಡಕ್ಷನ್ ವರ್ಕ್ ಮಾಡಿದ್ದಾರೆ. ಲೋಕೇಂದ್ರ ಸೂರ್ಯ, ಥ್ರಿಲ್ಲರ್ ಮಂಜು, ಸುನಿಲ್ ಬಾಲ್ಡರ್, ಪುನೀತ್, ಅಭಿ ಉಳಿದ ಪಾತ್ರಗಳಲ್ಲಿದ್ದಾರೆ.






Be the first to comment