ಕೃಷಿಗೆ ವೈಶಾಕ್ ಅಂತ್ಯಕ್ರಿಯೆಗೆ ತಡೆ

ಆತ್ಮಹತ್ಯೆ ಮಾಡಿಕೊಂಡ ಸ್ನೇಹಿತ,  ಉದ್ಯಮಿ ವೈಶಾಕ್  ಅಂತಿಮ ದರ್ಶನ ಪಡೆಯಲು ಚಾಮರಾಜಪೇಟೆ ಚಿತಾಗಾರಕ್ಕೆ ಆಗಮಿಸಿದ್ದ ನಟಿ ಕೃಷಿ ತಾಪಂಡ ಅವರಿಗೆ ವೈಶಾಕ್ ಕುಟುಂಬಸ್ಥರು  ಅಂತಿಮ ವಿಧಿವಿಧಾನಗಳ ವೇಳೆ ದರ್ಶನಕ್ಕೆ ಅವಕಾಶ ನೀಡದೆ ವಾಪಸ್ಸಾಗಿದ್ದಾರೆ.

ವೈಶಾಕ್  ಅಂತ್ಯಕ್ರಿಯೆ  ವೇಳೆ ಚಿತಾಗಾರಕ್ಕೆ ಬಂದ ಕೃಷಿ ತಾಪಂಡ ಅಂತಿಮ ದರ್ಶನ ಪಡೆಯಲು ಮುಂದಾದರು. ಆದರೆ ಕುಟುಂಬಸ್ಥರು ಆಕ್ಷೇಪ ವ್ಯಕ್ತಪಡಿಸಿ ಅಂತಿಮ   ದರ್ಶನಕ್ಕೆ ಅವಕಾಶ ನೀಡಲಿಲ್ಲ. “ನೀನು ನೋಡುವ ಅವಶ್ಯಕತೆ ಇಲ್ಲ, ಇಲ್ಲಿಂದ ತೆರಳು” ಎಂದು ಕುಟುಂಬಸ್ಥರು ತರಾಟೆಗೆ ತೆಗೆದುಕೊಂಡರು. ಮನನೊಂದ ಕೃಷಿ ತಾಪಂಡ ಚಿತಾಗಾರದಿಂದ ಹೊರಬಂದು ಕಾರಿನಲ್ಲೇ ಕುಳಿತು ಕಣ್ಣೀರಿಟ್ಟಿರು.

ಬುಧವಾರ ರಾತ್ರಿ ಆರ್.ಆರ್.ನಗರದ ಬಿ ಬ್ಲಾಕ್‌ನ ಕೃಷಿ ತಾಪಂಡ ಫ್ಲಾಟ್‌ನಲ್ಲಿ ವೈಶಾಕ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಘಟನೆ ಸಂಭವಿಸಿದ ವೇಳೆ ಕೃಷಿ ತಾಪಂಡ ನೆಲಮಂಗಲದಲ್ಲಿದ್ದರು. ಆತ್ಮಹತ್ಯೆಗೂ ಮುನ್ನ ವೈಶಾಕ್, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಂದೇಶ ಕಳುಹಿಸಿದ್ದರು ಎನ್ನಲಾಗಿದೆ.

ಹಲವು ದಿನಗಳಿಂದ ವೈಶಾಕ್, ಕೃಷಿ ನಿವಾಸದಲ್ಲೇ ವಾಸವಾಗಿದ್ದು, ಇಬ್ಬರ ಬಳಿಯೂ ಫ್ಲಾಟ್‌ನ ಕೀ ಇತ್ತು ಎಂದು ತಿಳಿದು ಬಂದಿದೆ. ಘಟನಾ ಸ್ಥಳದಲ್ಲಿ ಯಾವುದೇ ಡೆತ್‌ನೋಟ್ ಪತ್ತೆಯಾಗಿಲ್ಲ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!