ಬಿ.ಕೆ.ಶ್ರೀನಿವಾಸ್

ಬಿ.ಕೆ.ಶ್ರೀನಿವಾಸ್ (ಬೆಂ.ಕೋ.ಶ್ರೀ) ‘ಜೀವನಯಾನ’ ಪುಸ್ತಕ ಬಿಡುಗಡೆ

ಬುಧವಾರ ಗಾಂಧಿ ಭವನದಲ್ಲಿ ನಿರ್ಮಾಪಕ ಬಿ.ಕೆ.ಶ್ರೀನಿವಾಸ್(ಬೆಂ.ಕೊ.ಶ್ರೀ) ಅವರ ಸಿನಿಮಾ, ವ್ಯಾಪಾರ, ಹೋರಾಟ, ಅಜೇಯ ಮನೋಬಲದ ಯಶೋಗಾಥೆಯನ್ನೊಳಗೊಂಡ ‘ಬಿ.ಕೆ.ಶ್ರೀನಿವಾಸ ಒಂದು ಅಸಾಮಾನ್ಯ ಜೀವನಯಾನ’ ಪುಸ್ತಕದ ಬಿಡುಗಡೆ ಸಮಾರಂಭ ನಡೆಯಿತು.

ನೊಣವಿನಕೆರೆ ಕಾಡು ಸಿದ್ದೇಶ್ವರ ಮಠದ ಶ್ರೀಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಮಹಾಸ್ವಾಮಿಗಳು ಪುಸ್ತಕನ್ನು ಲೋಕಾರ್ಪಣೆ ಮಾಡಿದರು. ವೇದಿಕೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರುಗಳಾದ ಕೆ.ವಿ.ಚಂದ್ರಶೇಖರ್, ಸಾ.ರಾ.ಗೋವಿಂದು, ಪತ್ರಕರ್ತ ಜೋಗಿ, ಬಿಗ್ ಬಾಸ್ ಖ್ಯಾತಿಯ ಜಾಹ್ನವಿ ಹಾಗೂ ಇತರ ಗಣ್ಯರುಗಳು ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ವೇದಿಕೆಯಲ್ಲಿ ಅತಿಥಿಗಳನ್ನು ಸ್ವಾಗತಿಸುತ್ತಾ ಮಾತನಾಡಿದ ಬೆಂಕೋಶ್ರೀ ನಾನು ಕಡುಬಡ ಕುಟುಂಬದಿಂದ ಬಂದವನು. ಗುಡಿಸಲಿನಲ್ಲಿ ಹುಟ್ಟಿದ ನಾನು ಓದಿದ್ದು ೯ ನೇ ತರಗತಿ. ಸಿನಿಮಾ ಮೇಲೆ ತುಂಬಾ ಹುಚ್ಚಿತ್ತು. ಗಳಿಸಿದ್ದನ್ನು ಅದರಲ್ಲೇ ಸ್ವಲ್ಪ ಕಳೆದುಕೊಂಡೆ. ನೊಣವಿನಕೆರೆ ಕಾಡು ಸಿದ್ದೇಶ್ವರ ಮಠದ ಗುರುಗಳು ನನ್ನನ್ನು ಆಶೀರ್ವದಿಸಲು ಬಂದಿದ್ದಾರೆ. ಆರು ವರ್ಷಗಳ ಹಿಂದೆ ನನ್ನ ಹಾಗೂ ಗುರುಗಳ ಭೇಟಿಯಾಗಿತ್ತು ಎಂದು ತಾವು ಜೀವನದಲ್ಲಿ ಬೆಳೆದುಬಂದ ಹಾದಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.

ಬಿ.ಕೆ.ಶ್ರೀನಿವಾಸ್

ಪತ್ರಕರ್ತ ಜೋಗಿ ಅವರು ಮಾತನಾಡುತ್ತ, ಬೆಂಕೋಶ್ರೀ ಅವರ ಸಿನಿಮಾಗಳನ್ನು ನೋಡಿ, ಅದರ ಬಗ್ಗೆ ಬರೆದಿದ್ದೇವೆ. ಅವರ ಹಾಲು ಶ್ರೀನಿವಾಸ ಅಲ್ಲ, ಆಲ್ ಶ್ರೀನಿವಾಸ, ಒಳ್ಳೆಯ ಸಿನಿಮಾ ಮಾಡುವುದು ಅವರ ಫ್ಯಾಷನ್ ಆಗಿತ್ತು. ಅವರು ಸಾಧನೆ ದೊಡ್ಡದು ಎಂದರು.

ಸಾ.ರಾ.ಗೋವಿಂದು ಮಾತನಾಡುತ್ತಾ, ಶ್ರೀನಿವಾಸ್ ಅವರು ತಾವು ಬೆಳೆದುಬಂದ ದಾರಿಯನ್ನು ಹೇಳಿಕೊಂಡಿದ್ದಾರೆ. ನಾನು ಹತ್ತು ಸಾವಿರ ರಾಜಕುಮಾರ್ ಅಭಿಮಾನಿಗಳ ಸಂಘವನ್ನು ಮಾಡಿದೆ. ಸುರ್ವೆ ಅವರ ಜತೆ ಸೇರಿ ಇವರೂ ಅಭಿಮಾನಿಗಳ ಸಂಘ ಮಾಡಿದ್ದರು. ಅಲ್ಲಿಗೆ ನಾನು ಕೂಡ ಹೋಗಿದ್ದೆ. ಅವರ ಚಟುವಟಿಕೆ ನೋಡಿದಾಗಲೇ ಹೇಳಿದ್ದೆ. ಬೆಂಕೋಶ್ರೀ ಮುಂದೆ ದೊಡ್ಡ ವ್ಯಕ್ತಿಯಾಗಿ ಬೆಳೆಯುತ್ತಾರೆ ಅಂತ. ಅವರು ನನ್ನ ಮಗನನ್ನು ಮೊದಲಬಾರಿಗೆ ಹೀರೋ ಮಾಡಿದ್ದರು. ಅದರೆ ಅವರನ್ನು ಚಿತ್ರರಂಗ ಕೈ ಹಿಡಿಯಲಿಲ್ಲ. ಆದರೆ ಅವರು ತಮ್ಮ ನೋವನ್ನು ಎಲ್ಲೂ ಹೇಳಿಕೊಳ್ಳಲಿಲ್ಲ ಎಂದರು.

ಮತ್ತೊಬ್ಬ ಅತಿಥಿ ಜಾಹ್ನವಿ ಮಾತನಾಡಿ ನಮ್ಮೆಲ್ಲರಿಗೂ ಬೆಂಕೋಶ್ರೀ ಅವರು ಸ್ಪೂರ್ತಿ. ಓದಲು ಬಾರದ ವ್ಯಕ್ತಿ, ತಮ್ಮ ಜೀವನ ಗಾಥೆಯನ್ನು ನಾವೆಲ್ಲ ಓದುವಂತೆ ಮಾಡಿದ್ದಾರೆ. ಅವರ ಸಾಧನೆ ಬಹಳ ದೊಡ್ಡದು ಎಂದರು. ಕೊನೆಯಲ್ಲಿ ಶ್ರೀಗಳು ಆಶಿರ್ವಚನ ಮಾಡಿದರು.

ಬಿ.ಕೆ.ಶ್ರೀನಿವಾಸ್

Be the first to comment

Leave a Reply

Your email address will not be published. Required fields are marked *

Translate »
error: Content is protected !!