ಸೂಪರ್‌ಸ್ಟಾರ್ ರಜನಿಕಾಂತ್ ನಟನೆ, ಕಮಲ್ ಹಾಸನ್ ಅವರ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ಚಿತ್ರಕ್ಕೆ ‘ಧರ್ಮನ್’ ಎಂದು ಶೀರ್ಷಿಕೆ ಇಡಲಾಗಿದೆ.
ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ನ್ನು ಅನಾವರಣಗೊಳಿಸಲಾಯಿತು. ‘ತಲೈವರ್ 173’ ಎಂದು ಕರೆಯಲಾಗುತ್ತಿದ್ದ ಈ ಚಿತ್ರಕ್ಕೆ ‘ಧರ್ಮನ್’ ಎಂದು ಶೀರ್ಷಿಕೆ ನೀಡಲಾಗಿದೆ ಎಂದು ಚಿತ್ರತಂಡ ಘೋಷಿಸಿದೆ. ಚಿತ್ರವನ್ನು ‘ಓ ಮೈ ಕಡವುಲೆ’ ಮತ್ತು ‘ಡ್ರ್ಯಾಗನ್’ ಖ್ಯಾತಿಯ ಅಶ್ವತ್ಥ್ ಮಾರಿಮುತ್ತು ನಿರ್ದೇಶಿಸಲಿದ್ದಾರೆ.
ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ರಜನಿಕಾಂತ್ ಆಪರೇಷನ್ ಥಿಯೇಟರ್‌ನೊಳಗೆ ರಕ್ತಸಿಕ್ತ ಆಯುಧ ಹಿಡಿದು ವ್ಯಕ್ತಿಯೊಬ್ಬರ ಮೇಲೆ ನಿಂತಿರುವುದು ಕಂಡು ಬಂದಿದೆ. ಪೋಸ್ಟರ್‌ನಲ್ಲಿ ಶೀರ್ಷಿಕೆಗೆ ‘ದಿ ಡೆಡ್ಲಿ ಡಾಕ್ಟರ್’ ಎಂಬ ಟ್ಯಾಗ್‌ಲೈನ್ ಇದೆ.
ಚಿತ್ರದಲ್ಲಿ ಸಿಮ್ರಾನ್, ರಾಶಿ ಖನ್ನಾ ಮತ್ತು ಯೋಗಿ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಬೆಂಬಲದ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಅವರ ಸಂಗೀತ ಸಂಯೋಜನೆ ಇದೆ. ನಿಕೇತ್ ಬೊಮ್ಮಿ ಛಾಯಾಗ್ರಾಹಕರಾಗಿದ್ದಾರೆ. ಪ್ರದೀಪ್ ಇ. ರಾಘವ್ ಅವರ ಸಂಕಲನವಿದೆ.
—-





Be the first to comment