ತೆಲುಗು ಅವಕಾಶಗಳಿಗಾಗಿ ದಿಗಂತ್ ಮನವಿ

ನಟ ದಿಗಂತ್  ಅವರು ಕನ್ನಡದಲ್ಲಿ ನಿರೀಕ್ಷಿತ ಯಶಸ್ಸು ಸಿಗದ ಹಿನ್ನೆಲೆಯಲ್ಲಿ  ತೆಲುಗು ಚಿತ್ರರಂಗದಲ್ಲಿ ಅವಕಾಶಗಳಿಗಾಗಿ ಬಹಿರಂಗವಾಗಿ ಮನವಿ ಮಾಡಿದ್ದಾರೆ.

ಸಮಂತಾ ನಟನೆಯ ಬಹುನಿರೀಕ್ಷಿತ ‘ಮಾ ಇಂಟಿ ಬಂಗಾರಂ’ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ದಿಗಂತ್, ತೆಲುಗು ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಅವಕಾಶ ನೀಡುವಂತೆ ಕೋರಿದ್ದಾರೆ.

‘ಸಮಂತಾ ಅವರ ಕೆಲಸವನ್ನು ನಾನು ಹಲವು ವರ್ಷಗಳಿಂದ ಮೆಚ್ಚಿಕೊಂಡು ಬಂದಿದ್ದೇನೆ. ನಂದಿನಿ ರೆಡ್ಡಿ ನಿರ್ದೇಶನದ ‘ಓಹ್ ಬೇಬಿ’ ಸಿನಿಮಾ ನನಗೆ ತುಂಬಾ ಇಷ್ಟ. ಈ ಚಿತ್ರದಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿರುವುದು ಸಂತಸದ ವಿಚಾರ. ನನಗೆ ಮತ್ತೆ ಅವಕಾಶ ನೀಡುತ್ತೀರಾ?’  ನನ್ನನ್ನು ನಾನು ಮತ್ತೊಮ್ಮೆ ಸಾಬೀತು ಮಾಡಿಕೊಳ್ಳಲು ಇನ್ನೊಂದು ಅವಕಾಶ ಕೊಡಿ’ ಎಂದು ಮನವಿ ಮಾಡಿದರು.

 ‘ಮಾ ಇಂಟಿ ಬಂಗಾರಂ’ ಚಿತ್ರದಲ್ಲಿ ಅವಕಾಶ ನೀಡಿದ ನಿರ್ದೇಶಕಿ ನಂದಿನಿ ರೆಡ್ಡಿ ಹಾಗೂ ನಟಿ ಸಮಂತಾ ಅವರಿಗೆ ದಿಗಂತ್ ಕೃತಜ್ಞತೆ ಸಲ್ಲಿಸಿದರು.

ಕೆಲ ದಿನಗಳ ಹಿಂದೆ ಅವಕಾಶಗಳ ಕೊರತೆಯಿಂದ ಬಾಡಿಗೆ ಆದಾಯದ ಮೇಲೆ  ಜೀವನ ಸಾಗಿಸುವಂತಾಗಿದೆ ಎಂದು ದಿಗಂತ್ ಹೇಳಿಕೊಂಡಿದ್ದರು. ತೆಲುಗು ಚಿತ್ರರಂಗದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಲು ದಿಗಂತ್ ಮುಂದಾಗಿದ್ದಾರೆ. ಆ್ಯಕ್ಷನ್-ಕಾಮಿಡಿ ತೆಲುಗು ಸಿನಿಮಾ ‘ಮಾ ಇಂಟಿ ಬಂಗಾರಂ’ ಜೂನ್ 19ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!