‘ಸೈನಿಕ 2’ ಮೂಲಕ ಯೋಗೀಶ್ವರ್ ಕಂಬ್ಯಾಕ್?

ನಟ ಹಾಗೂ ರಾಜಕಾರಣಿ ಸಿ.ಪಿ. ಯೋಗೀಶ್ವರ್ ತಮ್ಮ ವೃತ್ತಿಜೀವನದ ಪ್ರಮುಖ ಚಿತ್ರಗಳಲ್ಲಿ ಒಂದಾದ ‘ಸೈನಿಕ’ ಚಿತ್ರದ ಸೀಕ್ವೆಲ್ ‘ಸೈನಿಕ 2’ ಮೂಲಕ ಮತ್ತೆ ಬಣ್ಣ ಹಚ್ಚುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಈ ಕುರಿತು ಅಧಿಕೃತ ಘೋಷಣೆ ಜುಲೈನಲ್ಲಿ ಹೊರಬೀಳುವ ನಿರೀಕ್ಷೆಯಿದೆ. ಅದೇ ಸಂದರ್ಭದಲ್ಲಿ ಯೋಗೀಶ್ವರ್  ಪುತ್ರ ಧ್ಯಾನ್ ಯೋಗೀಶ್ವರ್ ಧ್ಯಾನ್  ಅವರ ಮೊದಲ ಚಿತ್ರ ಹಾಗೂ ಯೋಗೀಶ್ವರ್ ಅವರ ಕಂಬ್ಯಾಕ್ ಚಿತ್ರವನ್ನು ಘೋಷಿಸುವ ಸಾಧ್ಯತೆ  ಇದೆ ಎನ್ನಲಾಗುತ್ತಿದೆ.

ಧ್ಯಾನ್ ಯೋಗೀಶ್ವರ್ ಅಭಿನಯದ ಮೊದಲ ಚಿತ್ರವನ್ನು ಖ್ಯಾತ ನಿರ್ದೇಶಕ ನಾಗಣ್ಣ ನಿರ್ದೇಶಿಸಲಿದ್ದಾರೆ ಎನ್ನಲಾಗಿದೆ.   ಚಿತ್ರಕ್ಕೆ ಕಥೆಗಾರ ಎಂಎಸ್ ರಮೇಶ್, ಛಾಯಾಗ್ರಾಹಕ ಶೇಖರ್ ಚಂದ್ರು ಹಾಗೂ ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಕೈಜೋಡಿಸುವ ಸಾಧ್ಯತೆ ಇದೆ.

ಸದ್ಯಕ್ಕೆ ‘ಸೈನಿಕ 2’ ಯೋಜನೆ ಕುರಿತು ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ. ನಿರ್ದೇಶಕ, ನಿರ್ಮಾಣ ಸಂಸ್ಥೆ ಹಾಗೂ ಇತರ ಕಲಾವಿದರ ಆಯ್ಕೆ ಕುರಿತು ಅಧಿಕೃತ ಮಾಹಿತಿ ಹೊರ ಬರಬೇಕಿದೆ. 2002ರಲ್ಲಿ ಬಿಡುಗಡೆಯಾದ ‘ಸೈನಿಕ’ ಚಿತ್ರ ಯೋಗೀಶ್ವರ್ ಅವರಿಗೆ ಜನಪ್ರಿಯತೆ ತಂದುಕೊಟ್ಟಿತ್ತು. ದೇಶಭಕ್ತಿ, ಕರ್ತವ್ಯನಿಷ್ಠೆ, ಧೈರ್ಯ ಮತ್ತು ತ್ಯಾಗದ ಕಥಾಹಂದರ ಹೊಂದಿದ್ದ ಈ ಆ್ಯಕ್ಷನ್ ಚಿತ್ರದಲ್ಲಿ ಯೋಗೀಶ್ವರ್ ಸೇನಾ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!