ಸೋನು ನಿಗಮ್ ಗೆ ಆರೋಗ್ಯ ಸಮಸ್ಯೆ

ಖ್ಯಾತ ಗಾಯಕ ಸೋನು ನಿಗಮ್ ಅವರಿಗೆ ತೀವ್ರ ಆರೋಗ್ಯ ಸಮಸ್ಯೆ ಎದುರಾಗಿದ್ದು,  ಆರೋಗ್ಯ ಸ್ಥಿತಿ ಪೂರ್ಣವಾಗಿ ಸುಧಾರಿಸದಿದ್ದರೂ ಅಭಿಮಾನಿಗಳ ನಿರೀಕ್ಷೆಯನ್ನು ನಿರಾಸೆಗೊಳಿಸಲು ಇಷ್ಟವಿಲ್ಲ ಎಂದಿದ್ದಾರೆ.

“ಈ ಪರಿಸ್ಥಿತಿಯಿಂದ ನನ್ನ ಆತ್ಮವಿಶ್ವಾಸ ಸ್ವಲ್ಪ ಕುಂದಿದೆ. ಆದರೂ ಕಾರ್ಯಕ್ರಮ ನಡೆಸಲು ನಾನು ಸಂಪೂರ್ಣ ಸಿದ್ಧನಿದ್ದೇನೆ,” ಎಂದು ಸೋನು ನಿಗಮ್ ಹೇಳಿದ್ದಾರೆ.

ವೈದ್ಯರು ನನ್ನ ಆರೋಗ್ಯ ಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದ್ದಾರೆ. ನನ್ನ ನರಗಳು ಒತ್ತಡಕ್ಕೆ ಸಿಲುಕಿವೆ. ಕಳೆದ ಒಂದು ವಾರದಿಂದ MRI ಮತ್ತು CT ಸ್ಕ್ಯಾನ್‌ಗಳನ್ನು ಮಾಡಿಸಿಕೊಳ್ಳುತ್ತಿದ್ದೇನೆ. ಸಾಕಷ್ಟು ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ಫಿಸಿಯೋಥೆರಪಿ ಬಹಳ ನೋವಿನ ಅನುಭವವಾಗಿದೆ. ಈಗ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದೇನೆ” ಎಂದು ಹೇಳಿದ್ದಾರೆ.

”ನನ್ನ ಧ್ವನಿಯ ಮೇಲೂ ಚಿಕಿತ್ಸೆಯ ಪರಿಣಾಮ ಬಿದ್ದಿದೆ. ಸ್ನಾಯುಗಳನ್ನು ಸಡಿಲಗೊಳಿಸಲು ನೀಡಲಾಗುತ್ತಿರುವ ಔಷಧಿಗಳಿಂದ ಗಂಟಲು ಭಾರವಾದಂತಾಗಿದೆ. ರೋಗ್ಯ ಸ್ಥಿತಿ ಸಂಪೂರ್ಣವಾಗಿ ಸುಧಾರಿಸದಿದ್ದರೂ, ಅಭಿಮಾನಿಗಳ ನಿರೀಕ್ಷೆಯನ್ನು ನಿರಾಸೆಗೊಳಿಸಲು ಇಷ್ಟವಿಲ್ಲ”  ಎಂದು ಹೇಳಿದ್ದಾರೆ.

ದೀರ್ಘ ವಿರಾಮದ ಬಳಿಕ ಮುಂಬೈನಲ್ಲಿ ಕಾರ್ಯಕ್ರಮ ನೀಡುತ್ತಿರುವುದರಿಂದ ಅದನ್ನು ರದ್ದುಪಡಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!