ಹಾರರ್‌ ಕಡೆ ಮುಖ ಮಾಡಿದ ಜಾನ್ಹವಿ

ನಟಿ ಜಾನ್ಹವಿ ಕಪೂರ್ ಅವರನ್ನು ‘ಪೆದ್ದಿ’ ಸಿನಿಮಾದಲ್ಲಿ ಗ್ಲಾಮರೈಸ್ ಮಾಡಲಾಗಿದೆ ಎಂಬ ಟೀಕೆಗಳ  ಬೆನ್ನಲ್ಲೇ, ಅವರು ಈಗ ಹಾರರ್‌ ಜಾನರ್ ಕಡೆ ಮುಖ ಮಾಡಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ.

‘ತುಂಬಾಡ್’ ಖ್ಯಾತಿಯ ನಿರ್ದೇಶಕ ರಹಿ ಅನಿಲ್ ಬರ್ವೆ ಅವರ ಹೊಸ ಹಾರರ್-ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಲ್ಲಿ ಜಾನ್ಹವಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಜನಪದ ಕಥೆ ಹಾಗೂ ಹಾರರ್ ಅಂಶಗಳನ್ನು ಒಳಗೊಂಡಿರುವ ಈ ಕಥೆ ಜಾನ್ಹವಿಗೆ ಇಷ್ಟವಾಗಿದ್ದು, ಚಿತ್ರಕ್ಕೆ ಒಪ್ಪಿಗೆ ನೀಡುವ ಹಂತದಲ್ಲಿದ್ದಾರೆ ಎಂಬ ಮಾಹಿತಿ ಬಂದಿದೆ.

ಇದುವರೆಗೆ ಹೆಚ್ಚಿನ ಸಿನಿಮಾಗಳಲ್ಲಿ ಜಾನ್ಹವಿ ಕಪೂರ್ ಗ್ಲಾಮರಸ್ ಪಾತ್ರಗಳಲ್ಲೇ ಕಾಣಿಸಿಕೊಂಡಿದ್ದರು. ಇದೀಗ ವಿಭಿನ್ನ ಪಾತ್ರಗಳತ್ತ ಗಮನ ಹರಿಸಲು ಅವರು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಜಾನ್ಹವಿ ಕೈಯಲ್ಲಿ ಅಧಿಕೃತವಾಗಿ ಹೊಸ ಸಿನಿಮಾ ಇಲ್ಲದಿದ್ದರೂ, ಕರಣ್ ಜೋಹರ್ ನಿರ್ಮಾಣದ ಚಿತ್ರ, ‘ದೇವರ 2’ ಹಾಗೂ ತಮಿಳಿನ ಹೊಸ ಪ್ರಾಜೆಕ್ಟ್‌ಗಳ ಮಾತುಕತೆಗಳು ನಡೆಯುತ್ತಿವೆ.

ರಾಮ್ ಚರಣ್ ಜೊತೆ ನಟಿಸಿರುವ ‘ಪೆದ್ದಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ,  ಸಿನಿಮಾದಲ್ಲಿ ಜಾನ್ಹವಿ ಪಾತ್ರ ಮತ್ತು ಅವರ ಪ್ರೆಸೆಂಟೇಶನ್ ಕುರಿತು ಭಾರೀ ಚರ್ಚೆ ನಡೆಯುತ್ತಿದೆ

Be the first to comment

Leave a Reply

Your email address will not be published. Required fields are marked *

Translate »
error: Content is protected !!