ಪೋಲಾ ಪ್ರವೀಣ್ ಕುಮಾರ್ ನಿರ್ಮಾಣ ಹಾಗೂ ಗುರುಮೂರ್ತಿ ವಿ ನಿರ್ದೇಶನದ “ಶಿಖಂಡಿ” ಚಿತ್ರ ಮೇ 15 ರಂದು ಬಿಡುಗಡೆಯಾಗಲಿದೆ.
ಈಗಾಗಲೇ ಚಿತ್ರದ ಟ್ರೇಲರ್ ಹಾಗೂ ಹಾಡು ಬಿಡುಗಡೆಯಾಗಿ ಚಿತ್ರ ಗಮನ ಸೆಳೆದಿದೆ.ಮಹಾಭಾರತದಲ್ಲಿ ಬರುವ “ಶಿಖಂಡಿ” ಪಾತ್ರವನ್ನು ಆಧರಿಸಿರುವ ಕಥಾಹಂದರ ಇದು ಹೊಂದಿದೆ.
ಚಿತ್ರದ ನಾಯಕನಾಗಿ ಯುವರಾಜ್ ಗೌಡ ನಟಿಸಿದ್ದಾರೆ. ಚಿತ್ರದ ನಾಯಕಿ ಖ್ಯಾತಿ . ನಿಖಿಲ್, ನಿಖಿತಸ್ವಾಮಿ, ದೀಪಕ್ ಶೆಟ್ಟಿ, ನೀತು ವನಜಾಕ್ಷಿ, ರಾಘವೇಂದ್ರ (ರಾಗು), ಚಾಂದಿನಿ, ವೇದ, ಬಲ ರಾಜ್ವಾಡಿ, ನಯನ, ವಿಜಯ್ ಚೆಂಡೂರ್ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಮಂಜು ಕವಿ ಸಂಗೀತ ನಿರ್ದೇಶನವಿರುವ ಚಿತ್ರಕ್ಕೆ ಪ್ರದ್ಯೋತನ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಸ್ವಾಮಿ ಮೈಸೂರು ಛಾಯಾಗ್ರಹಣ, ಚಕ್ರಂ ಸಾಯಿ ಸಂಕಲನ ಚಿತ್ರಕ್ಕಿದೆ.
—–





Be the first to comment