ರಾಜ್ ಬಿ ಶೆಟ್ಟಿ ನಟನೆಯ ಹಿಂದಿ ಚಿತ್ರ ‘ ಬಂದರ್ ‘ ನ ಟೀಸರ್ ಬಿಡುಗಡೆ ಆಗಿದ್ದು ಸಿನಿಪ್ರಿಯರ ಗಮನ ಸೆಳೆದಿದೆ.
ಟೀಸರ್‌ನಲ್ಲಿ ರಾಜ್ ಬಿ ಶೆಟ್ಟಿ ಕೆಲ ಕ್ಷಣಗಳ ಕಾಲ ಕಾಣಿಸಿಕೊಂಡರೂ, ಅವರ ಸ್ಕ್ರೀನ್ ಪ್ರೆಸೆನ್ಸ್ ಮತ್ತು ಲುಕ್ ಚರ್ಚೆಗೆ ಕಾರಣವಾಗಿದೆ.
ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಬಹುನಿರೀಕ್ಷಿತ ಚಿತ್ರ ‘ಬಂದರ್’ ಮೂಲಕ ರಾಜ್ ಬಿ ಶೆಟ್ಟಿ ಬಾಲಿವುಡ್ ಪ್ರವೇಶಿಸುತ್ತಿದ್ದಾರೆ. ಚಿತ್ರದಲ್ಲಿ ಬಾಬಿ ಡಿಯೋಲ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಇದು ನೈಜ ಘಟನೆಗಳಿಂದ ಪ್ರೇರಿತ ಕ್ರೈಂ ಥ್ರಿಲ್ಲರ್ ಎಂದು ಹೇಳಲಾಗುತ್ತಿದ್ದು ಕುತೂಹಲ ಮೂಡಿಸಿದೆ.
ಗರುಡ ಗಮನ ವೃಷಭ ವಾಹನ ಚಿತ್ರದಲ್ಲಿನ ರಾಜ್ ಬಿ ಶೆಟ್ಟಿ ಅಭಿನಯದಿಂದ ಅನುರಾಗ್ ಕಶ್ಯಪ್ ಬಹಳ ಪ್ರಭಾವಿತರಾಗಿದ್ದು, ಈ ಚಿತ್ರದ ಬಗ್ಗೆ ಸಾರ್ವಜನಿಕವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅದಾದ ನಂತರ ಅನುರಾಗ್ ಮತ್ತು ರಾಜ್ ನಡುವೆ ಉತ್ತಮ ಸ್ನೇಹ ಬೆಳೆದಿದೆ. ಈಗ ‘ಬಂದರ್’ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ವಿಶೇಷವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಜೂನ್ 5ರಂದು ಬಿಡುಗಡೆಯಾಗಲಿರುವ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಒಂದು ಹಾಡಿನ ದೃಶ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ಸುದೀಪ್ ಶರ್ಮಾ ಮತ್ತು ಅಭಿಷೇಕ್ ಬ್ಯಾನರ್ಜಿ ಕಥೆ ಬರೆದಿದ್ದಾರೆ. ಸ್ಯಾಫ್ರನ್ ಮ್ಯಾಜಿಕ್‌ವರ್ಕ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಿಸಲಾಗುತ್ತಿದೆ.
ಜೀ ಸ್ಟುಡಿಯೋಸ್ ವಿತರಣೆಯ ಈ ಚಿತ್ರದಲ್ಲಿ ಸಬಾ ಆಜಾದ್, ಸನ್ಯಾ ಮಲ್ಹೋತ್ರಾ, ಸಪ್ನಾ ಪಬ್ಬಿ ಇತರರು ನಟಿಸಿದ್ದಾರೆ.
_





Be the first to comment