ಮಲೆ ಮಹದೇಶ್ವರನ ಸನ್ನಿಧಿಯಲ್ಲಿ ‘ಜೈಹೋ ಪರಬ್ರಹ್ಮ’ ಚಿತ್ರದ ಸ್ಕ್ರಿಪ್ಟ್ ಪೂಜೆ

ಮೈಸೂರು ಟೂರಿಂಗ್ ಟಾಕೀಸ್ ಲಾಂಛನದಲ್ಲಿ ಎಸ್.ಮಧುಮಾಲತಿ ಮತ್ತು ಶಶಿರೇಖ ಅವರು ನಿರ್ಮಿಸುತ್ತಿರುವ ‘ಜೈಹೋ ಪರಬ್ರಹ್ಮ’ ಚಿತ್ರದ ಸ್ಕ್ರಿಪ್ಟ್ ಪೂಜೆ ಇತ್ತೀಚೆಗೆ ಚಾಮರಾಜಪೇಟೆ ಮಲೆ ಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರತಂಡದ ಅನೇಕ ಸದಸ್ಯರು ಈ ಪೂಜ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸದ್ಯದಲ್ಲೇ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.

ಈ ಹಿಂದೆ ‘ಜಮಾನ’, ‘ಗುಡ್ ಬೈ’, ಹಾಗೂ ಸದ್ಯದಲ್ಲೇ ತೆರೆಗೆ ಬರಲಿರುವ `ದಿಗ್ದರ್ಶಕ` ಚಿತ್ರಗಳಲ್ಲಿ ಅಭಿನಯಿಸಿರುವ ಜಯಪ್ರಕಾಶ್ ಅವರು ಈ ಚಿತ್ರದ ನಾಯಕರಾಗಿ ಅಭಿನಯಿಸುತ್ತಿದ್ದಾರೆ. ನಿರ್ದೇಶನವನ್ನು ಜಯಪ್ರಕಾಶ್ ಅವರೆ ಮಾಡುತ್ತಿದ್ದಾರೆ. ನಾಯಕಿ ಸೇರಿದಂತೆ ಕಲಾವಿದರ ಆಯ್ಕೆ ನಡೆಯುತ್ತಿದ್ದು, ಸದ್ಯದಲ್ಲೇ ಚಿತ್ರೀಕರಣ ಆರಂಬಿಸುವುದಾಗಿ ಜಯಪ್ರಕಾಶ್ ಅವರು ತಿಳಿಸಿದ್ದಾರೆ. ವೈಶಾಖ್ ಶಶಿಧರನ್ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ನಿರಂಜನ್ ಬಾಬು ಅವರ ಛಾಯಾಗ್ರಹಣವಿದೆ. ಶಿವು ಅವರ ಸ್‍ಂಕಲನವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಚೇತನ್ ಕುಮಾರ್.

Be the first to comment

Leave a Reply

Your email address will not be published. Required fields are marked *

Translate »
error: Content is protected !!