ಅನಾಥ ಹೆಣ್ಣು ಮಕ್ಕಳಿಗೆ ನೆರವು ಘೋಷಿಸಿದ ನೋರಾ

‘ಕೆಡಿ’ ಸಿನಿಮಾದ ವಿವಾದಾತ್ಮಕ ‘ಸರ್ಸೆ ಸೆರಗು’ ಹಾಡಿನಲ್ಲಿ ನಟಿಸಿದ ಬಾಲಿವುಡ್ ನಟಿ ನೋರಾ ಫತೇಹಿ ಅನಾಥ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದ್ದಾರೆ.

‘ಸರ್ಸೆ ಸೆರಗು’ ಹಾಡು ಉತ್ತರ ಭಾರತದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾದ ಬಳಿಕ ನಟಿ ನೋರಾ ಫತೇಹಿ ಕೊನೆಗೂ ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ಹಾಜರಾಗಿ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ.

ನಿರ್ದೇಶಕ ಪ್ರೇಮ್ ಸೇರಿದಂತೆ ಚಿತ್ರತಂಡದ ಕೆಲವರು ಈಗಾಗಲೇ ಕ್ಷಮೆಯಾಚಿಸಿ ವಿವಾದಕ್ಕೆ ತೆರೆ ಎಳೆಯಲು ಯತ್ನಿಸಿದ್ದರೆ, ನೋರಾ ಮಾತ್ರ ವಿಚಾರಣೆ ಮುಂದೂಡುತ್ತಾ ಬಂದಿದ್ದರು. ಈಗ ಅವರು ಕೊನೆಗೂ ಆಯೋಗದ ಮುಂದೆ ಹಾಜರಾಗಿದ್ದಾರೆ.

‘ಯಾರ ಮನಸ್ಸನ್ನೂ ನೋಯಿಸುವ ಉದ್ದೇಶ ನನಗಿರಲಿಲ್ಲ. ಕಲಾವಿದೆಯಾಗಿ ಸಮಾಜಕ್ಕೆ ನನ್ನ ಜವಾಬ್ದಾರಿಯಿದೆ’ ಎಂದು ನೋರಾ ಹೇಳಿದ್ದಾರೆ.

ಈ ಬಗ್ಗೆ ಈಗಾಗಲೇ ನಟ ಸಂಜಯ್ ದತ್ ಮಹಿಳಾ ಆಯೋಗದ ಮುಂದೆ ಕ್ಷಮೆ ಕೇಳಿ 50 ಬುಡಕಟ್ಟು ಹೆಣ್ಣು ಮಕ್ಕಳ ಶಿಕ್ಷಣದ ಹೊಣೆ ಹೊರುವುದಾಗಿ ಭರವಸೆ ನೀಡಿದ್ದಾರೆ.

ಕಳೆದ ಮಾರ್ಚ್‌ನಲ್ಲಿ ಬಿಡುಗಡೆಯಾಗಿದ್ದ ‘ಸರ್ಕೆ ಚುನರಿ’ ಹಾಡು ಸಾಹಿತ್ಯ ಮತ್ತು ದೃಶ್ಯಗಳ ಕಾರಣದಿಂದ ಟೀಕೆಗೆ ಗುರಿಯಾಗಿತ್ತು. ಬಳಿಕ ಹಾಡನ್ನು ಯೂಟ್ಯೂಬ್‌ನಿಂದ ತೆಗೆದುಹಾಕಲಾಗಿತ್ತು. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಸಂಸತ್ತಿನಲ್ಲಿ ಈ ಹಾಡು ನಿಷೇಧಿಸಲಾಗಿದೆ ಎಂದು ಹೇಳಿದ್ದರು.

ಏಪ್ರಿಲ್ 30ಕ್ಕೆ ‘ಕೆಡಿ’ ಸಿನಿಮಾ ಬಿಡುಗಡೆಯಾಗಿದ್ದು, ಈ ವಿವಾದಾತ್ಮಕ ಹಾಡನ್ನು ಚಿತ್ರದಿಂದ ತೆಗೆಯಲಾಗಿದೆ. ಚಿತ್ರ ಇದುವರೆಗೆ ಉತ್ತಮ ಕಲೆಕ್ಷನ್ ಮಾಡಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!