ಡಾರ್ಲಿಂಗ್ ಕೃಷ್ಣ ನಿರ್ದೇಶನ ಜೊತೆಗೆ ನಾಯಕನಾಗಿ ನಟಿಸಿರುವ ‘ಲವ್ ಮಾಕ್ಟೇಲ್ 3’ ಚಿತ್ರ ಯಶಸ್ವಿಯಾಗಿ 50 ದಿನ ಪೂರೈಸಿದೆ. ಈ ವೇಳೆ ಚಿತ್ರಕ್ಕೆ ಗೆಲುವು ತಂದುಕೊಟ್ಟ ಪ್ರೇಕ್ಷಕರಿಗೆ ಡಾರ್ಲಿಂಗ್ ಕೃಷ್ಣ ಧನ್ಯವಾದ ಸಲ್ಲಿಸಿದ್ದಾರೆ.
ಲವ್ ಮಾಕ್ಟೇಲ್3 ಈ ವರ್ಷದ ಸೂಪರ್ ಹಿಟ್ ಚಿತ್ರವಾಗಿ ದಾಖಲಾಗಿದೆ. ಇದು ಧುರಂಧರ್ 2 ಚಿತ್ರದ ಎದುರು ಬಿಡುಗಡೆ ಆಗಿತ್ತು. ಇದೀಗ ನೂರರ ಗಡಿಯತ್ತ ಚಿತ್ರ ದಾಪುಗಾಲಿಡುತ್ತಿದೆ.
ಕ್ರಿಸ್‌ಮಿ ಬ್ಯಾನರಿನಡಿಯಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ದಿಲೀಪ್ ರಾಜ್, ಶ್ವೇತಾ ಪ್ರಸಾದ್, ರಚೆಲ್ ಡೇವಿಡ್, ನಯೇರಾ, ಜಗದೀಶ್, ಅಭಿಲಾಶ್, ಗಿರಿರಾಜ್, ದಳಪತಿ ಮುಂತಾದವರ ತಾರಾಗಣ ಚಿತ್ರಕ್ಕಿದೆ.
ಶ್ರೀ ಕ್ರೇಜಿ ಮೈಂಡ್ಸ್ ಛಾಯಾಗ್ರಹಣ ಮತ್ತು ಸಂಕಲನ, ನಕುಲ್ ಅಭಯಂಕರ್ ಸಂಗೀತ, ಅಮರ್ ಮತ್ತು ಜೋನಾ ಕಲಾ ನಿರ್ದೇಶನ ಚಿತ್ರಕ್ಕಿದೆ.
ಈ ಚಿತ್ರದ ಕಥೆ ಕಳ್ಳತನ ಮಾಡಲಾಗಿದೆ ಎಂದು ನಿರ್ದೇಶಕರು ಒಬ್ಬರು ಆರೋಪ ಮಾಡಿದ್ದರು. ಆದರೆ ವಾಣಿಜ್ಯ ಮಂಡಳಿಯ ಮಧ್ಯಸ್ಥಿಕೆಯ ನಂತರ ಈ ವಿವಾದವನ್ನು ಬಗೆಹರಿಸಲಾಯಿತು.
__





Be the first to comment