ಮದುವೆ ಆಗದೆ ಮಕ್ಕಳು ಆಗುವುದು ತಪ್ಪಲ್ಲ ಎಂದ ನಟಿ!

ಮದುವೆಯ ಆಗದೆ ಮಕ್ಕಳನ್ನು ಮಾಡಿಕೊಳ್ಳುವುದು ತಪ್ಪಲ್ಲ ಎಂದು ನಟಿ ನಿತ್ಯಾ ಮೆನನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮದುವೆ ಜೀವನದ ಒಂದು ಭಾಗ ಅಷ್ಟೇ. ಅದೇ ಜೀವನವಲ್ಲ. ನೀವು ಮಕ್ಕಳನ್ನು ಬಯಸಿದರೆ, ನೀವು ಮದುವೆಯಾಗಬೇಕಾಗಿಲ್ಲ, ಅದು ಸಂಪೂರ್ಣವಾಗಿ ವೈಯಕ್ತಿಕ ನಿರ್ಧಾರ ಎಂದು ಹೇಳಿದ್ದಾರೆ. ಈ ಹೇಳಿಕೆ ಈಗ ವೈರಲ್ ಆಗುತ್ತಿವೆ.

ಈ ಹಿಂದೆ ಅಜ್ಜಿ ಮದುವೆಯ ಬಗ್ಗೆ ತನ್ನ ಮೇಲೆ ಒತ್ತಡ ಹೇರುತ್ತಿದ್ದರು, ಆದರೆ ಈಗ ಮನೆಯಲ್ಲಿ ಆ ಸಮಸ್ಯೆ ಇಲ್ಲ ಎಂದು ಅವರು ಹೇಳಿದ್ದಾರೆ.

ಈ ಹಿಂದೆ ನಿತ್ಯಾ ಮೆನನ್ ಮದುವೆಯ ಬಗ್ಗೆ ಹಲವು ಸುದ್ದಿಗಳು ಹರಿದಾಡಿದ್ದವು. ಪ್ರಸ್ತುತ ಅವರು ಅವಿವಾಹಿತರಾಗಿದ್ದು, ಒಂಟಿ ಜೀವನ ನಡೆಸುತ್ತಿದ್ದಾರೆ.

ಅಲಾ ಮೊದಲೈಯಿಂದಿ ಚಿತ್ರದ ಮೂಲಕ ತೆಲುಗು ಪ್ರೇಕ್ಷಕರನ್ನು ನಿತ್ಯಾ ಮೆನನ್ ರಂಜಿಸಿದರು. ನಂತರ ಅವರು ಹಲವು ಚಲನಚಿತ್ರಗಳನ್ನು ಮಾಡಿ ಪ್ರೇಕ್ಷಕರನ್ನು ಮೆಚ್ಚಿಸಿದರು. ನಿತ್ಯಾ ಮೆನನ್ ತಮಿಳಿನಲ್ಲೂ ದೊಡ್ಡ ನಾಯಕರೊಂದಿಗೆ ಸಿನಿಮಾಗಳನ್ನು ಮಾಡಿದ್ದಾರೆ.

ಕನ್ನಡದಲ್ಲಿ ಅವರು 7 ಓ ಕ್ಲಾಕ್, ಜೋಶ್, ಕೋಟಿಗೊಬ್ಬ 2, ಮೈನಾ ಚಿತ್ರಗಳಲ್ಲಿ ನಟಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!