‘ದೃಶ್ಯಂ 2’ಗೆ ಕೇರಳದಲ್ಲಿ ಹಿನ್ನಡೆ

ಮಲಯಾಳಂ ಸೂಪರ್ ಸ್ಟಾರ್ ಮೋಹನ್​ಲಾಲ್ ಅಭಿನಯದ ‘ದೃಶ್ಯಂ 2’ ಸಿನಿಮಾ ಥಿಯೇಟರ್‌ನಲ್ಲಿ ನಿರೀಕ್ಷೆಗಿಂತ ಕಡಿಮೆ ಗಳಿಕೆ ಮಾಡಿ ಹಿನ್ನಡೆ ಅನುಭವಿಸಿದೆ.

ಕೇರಳದಲ್ಲಿ ಮರು ಬಿಡುಗಡೆಗೊಂಡ ಚಿತ್ರ ಕೇವಲ 3.5 ಲಕ್ಷ ರೂಪಾಯಿ ಗಳಿಕೆ ಮಾಡಿರುವುದು ಚಿತ್ರತಂಡಕ್ಕೆ ಶಾಕ್ ನೀಡಿದೆ. ಜೀತು ಜೊಸೆಫ್ ನಿರ್ದೇಶನದ ಈ ಚಿತ್ರ ಕೋವಿಡ್ ಸಮಯದಲ್ಲಿ ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗಿತ್ತು.

ದೃಶ್ಯಂ 3 ಬಿಡುಗಡೆಗೆ ಸಿದ್ಧವಾಗುತ್ತಿರುವ ಹಿನ್ನೆಲೆಯಲ್ಲಿ ಎರಡನೇ ಭಾಗವನ್ನು ಥಿಯೇಟರ್‌ನಲ್ಲಿ ಬಿಡುಗಡೆ ಮಾಡುವ ಪ್ರಯತ್ನ ಮಾಡಲಾಗಿತ್ತು. ದೃಶ್ಯಂ 2 ಸಿನಿಮಾ ಈಗಾಗಲೇ ಒಟಿಟಿಯಲ್ಲಿ ಲಭ್ಯವಿದ್ದು ಹೆಚ್ಚಿನ ಪ್ರೇಕ್ಷಕರು ಅದನ್ನು ವೀಕ್ಷಿಸಿರುವುದರಿಂದ ಥಿಯೇಟರ್‌ಗೆ ನೋಡಲು ಜನರು ಆಸಕ್ತಿ ತೋರಿಲ್ಲ.

ಅಲ್ಲದೇ ಕೇರಳದಲ್ಲಿ ಚುನಾವಣೆ ಕಾವು ಜೋರಾಗಿದ್ದು ಚಿತ್ರದ ಕಲೆಕ್ಷನ್ ಮೇಲೆ ಪರಿಣಾಮ ಬೀರಿದೆ.

ಆದರೆ ದೃಶ್ಯಂ 3 ಮೇಲೆ ನಿರೀಕ್ಷೆಗಳು ಹೆಚ್ಚಾಗಿದೆ. ಇದು ಒಟಿಟಿ ಮೂಲಕ ಬಿಡುಗಡೆಯಾಗಿ ಯಶಸ್ಸು ಸಾಧಿಸುವ ಸಾಧ್ಯತೆ ಇದೆ ಎಂದು ಅಂದಾಜು ಮಾಡಲಾಗಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!