ದಳಪತಿ ವಿಜಯ್ ಅವರ ಬೌನಿರೀಕ್ಷಿತ ಚಿತ್ರ ‘ಜನ ನಾಯಗನ್ ‘ ದೃಶ್ಯಗಳನ್ನು ಲೇಕ್ ಮಾಡಿದ ಒಟ್ಟು ಆರು ಆರೋಪಿಗಳನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಚಿತ್ರ ಬಿಡುಗಡೆಗೂ ಮುನ್ನ ಕೆಲ ದೃಶ್ಯಗಳು ಲೀಕ್ ಆಗಿರುವುದು ಚಿತ್ರತಂಡಕ್ಕೆ ದೊಡ್ಡ ಶಾಕ್ ನೀಡಿದೆ. ಚಿತ್ರವನ್ನು ನಿರ್ಮಿಸುತ್ತಿರುವ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಸಂಸ್ಥೆಯ ಕಾನೂನು ಸಲಹೆಗಾರ ವಿಜಯನ್ ಸುಬ್ರಹ್ಮಣ್ಯಂ, “ಲೀಕ್ ಆದ ದೃಶ್ಯಗಳನ್ನು ಡೌನ್‌ಲೋಡ್, ಫಾರ್ವರ್ಡ್ ಅಥವಾ ಶೇರ್ ಮಾಡಿದರೂ ಕಠಿಣ ಕ್ರಿಮಿನಲ್ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಸಿನಿಮಾ ನೂರಾರು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. ಇದು ಥಿಯೇಟರ್, ಸ್ಯಾಟಲೈಟ್ ಮತ್ತು ಒಟಿಟಿ ಹಕ್ಕುಗಳ ಮೂಲಕ ದೊಡ್ಡ ವ್ಯವಹಾರ ಹೊಂದಿದೆ. ಎಚ್. ವಿನೋದ್ ನಿರ್ದೇಶನ ಹಾಗೂ ಅನಿರುದ್ಧ್ ರವಿಚಂದರ್ ಸಂಗೀತ ಹೊಂದಿರುವ ಈ ಚಿತ್ರದ ಬಗ್ಗೆ ದೊಡ್ಡ ನಿರೀಕ್ಷೆ ಇದೆ.
ಸೆನ್ಸಾರ್ ಸಮಸ್ಯೆಯಿಂದ ಈ ಚಿತ್ರ ಬಿಡುಗಡೆ ಮುಂದೆ ಹೋಗಿದೆ. ರಾಜಕೀಯ ಪ್ರವೇಶದ ಹೊಸ್ತಿಲಲ್ಲಿರುವ ವಿಜಯ್ ಅವರಿಗೆ ಬಿಡುಗಡೆ ತಡ ಆಗಿರುವ ಜೊತೆಗೆ ಪೈರಸಿ ದೊಡ್ಡ ಹಿನ್ನಡೆಯಾಗಿದೆ. ಇದು ಅಭಿಮಾನಿಗಳಲ್ಲೂ ಆತಂಕ ಮೂಡಿಸಿದೆ.
ಚಿರಂಜೀವಿ, ಸೂರ್ಯ, ಶಿವಕಾರ್ತಿಕೇಯನ್, ಖುಷ್ಬೂ ಸುಂದರ್, ಕಾರ್ತಿ, ಜಿ.ವಿ. ಪ್ರಕಾಶ್ ಕುಮಾರ್ ಸೇರಿದಂತೆ ಹಲವು ಗಣ್ಯರು ‘ಜನ ನಾಯಗನ್ ‘ ಪೈರಸಿ ವಿರುದ್ಧ ಧ್ವನಿ ಎತ್ತಿ ವಿಜಯ್ ಅವರಿಗೆ ಬೆಂಬಲ ಸೂಚಿಸಿದ್ದಾರೆ.
_





Be the first to comment