ಕೆರಾಡಿಯಲ್ಲಿ ಫಿಲ್ಮ್​​ಸಿಟಿ ನಿರ್ಮಿಸಿದ ರಿಷಬ್ ಶೆಟ್ಟಿ

ರಿಷಬ್ ಶೆಟ್ಟಿ ಅವರು ಕುಂದಾಪುರದ ಕೆರಾಡಿಯಲ್ಲಿ ‘ಕಾಂತಾರ 2’ ಚಿತ್ರಕ್ಕಾಗಿ ಭವ್ಯ ಸೆಟ್ ನಿರ್ಮಿಸಿ ಅದನ್ನು ಇದೀಗ ಫಿಲ್ಮ್ ಸಿಟಿಯಾಗಿ ಪರಿವರ್ತಿಸಿದ್ದಾರೆ.

ರಿಷಬ್ ಶೆಟ್ಟಿ  ಕೆರಾಡಿಯಲ್ಲಿ ‘ಕಾಂತಾರ 2’ ಚಿತ್ರದ ಸೆಟ್ ನಿರ್ಮಾಣ ಮಾಡಿದರು. ಈಗ ಇದನ್ನು ಸಿನಿಮಾ ಸಿಟಿಯಾಗಿ ಬದಲಾಯಿಸಿರೋದಾಗಿ ಅವರು ಹೇಳಿದ್ದಾರೆ.

‘ಕಾಂತಾರದ ಬಳಿಕ ಕುಂದಾಪುರ, ಬೈಂದೂರು ಭಾಗ ಫಿಲ್ಮ್ ಸಿಟಿಯಾಗಿ ಬದಲಾಗಿದೆ. ಈ ಭಾಗದಲ್ಲಿ ಇನ್ನಷ್ಟು ಸಿನಿಮಾ ಶೂಟ್ ಆಗುವ ನಿರೀಕ್ಷೆ ಇದೆ. ಈ ಭಾಗದ ಜನರಿಗೆ ಸಿನಿಮಾದ ಮೇಲಿನ ಗೌರವ ಹೆಚ್ಚಾಗಿದೆ. ಕುಂದಾಪುರ ಸೇರಿದಂತೆ ಕರಾವಳಿ ಭಾಗದಲ್ಲಿ ಅಪಾರ ಪ್ರಕೃತಿ ಸೌಂದರ್ಯವಿದೆ. ಇದನ್ನು ಕೆಲವು ಸಿನಿಮಾಗಳಲ್ಲಿ ಸೆರೆ ಹಿಡಿಯಲಾಗಿದೆ. ಆದರೆ ಇದನ್ನು ಸಂಪೂರ್ಣವಾಗಿ ಬಳಸಿಕೊಂಡಿಲ್ಲ’ ಎಂದು ರಿಷಬ್ ಶೆಟ್ಟಿ  ಹೇಳಿದ್ದಾರೆ.

ರಿಷಬ್ ಶೆಟ್ಟಿ ಅವರು ಸದ್ಯ ‘ಜೈ ಹನುಮಾನ್’ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಮುಹೂರ್ತ ಇತ್ತೀಚೆಗೆ ಹಂಪಿಯ ಅಂಜನಾದ್ರಿ ಬೆಟ್ಟದಲ್ಲಿ ನಡೆದಿದೆ.

ರಿಷಬ್  ಅವರು ಸೋಶಿಯಲ್ ಮೀಡಿಯಾದಲ್ಲಿ ರಾಜ್ ಬಿ ಶೆಟ್ಟಿ, ಹೊಂಬಾಳೆ ಫಿಲ್ಮ್ಸ್, ರುಕ್ಮಿಣಿ ವಸಂತ್ ಸೇರಿದಂತೆ ಎಲ್ಲರನ್ನೂ ಅನ್​​ಫಾಲೋ ಮಾಡಿದ್ದು, ಈಗ ಅವರು ರಿಷಬ್ ಶೆಟ್ಟಿ ಫಿಲ್ಮ್ಸ್, ರಿಷಬ್ ಶೆಟ್ಟಿ ಫೌಂಡೇಷನ್ ಹಾಗೂ ಪತ್ನಿ ಪ್ರಗತಿ ಶೆಟ್ಟಿ ಅವರನ್ನು ಮಾತ್ರ ಫಾಲೋ ಮಾಡಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!